
ಅಮೃತ ಮಹೋತ್ಸವದ ಪ್ರಯುಕ್ತ ಮಾರ್ಚ್ 8 ರಂದು ಗುರುಕುಲ ಶಾಲೆಯಲ್ಲಿ ಬಾಲೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿರುವ ಶ್ರೀಮತಿ ಗೀತಾ ಸೇರಿಗಾರ್ ರವರು ವಹಿಸಿದ್ದರು. ಸದಸ್ಯರಾಗಿರುವ ರಘುಪತಿ ಕಾಮತ್, ಪೋಷಕರಾದ ಶ್ರೀಮತಿ ಸುಂದರಿ, ಸ್ಪರ್ಧಾ ಸಮಿತಿಯ ಸದಸ್ಯರಾದ ಶ್ರೀಮತಿ ಸಂಧ್ಯಾ ಜೋಶಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪೂರ್ಣಿಮಾ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಘುಪತಿ ಕಾಮತ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ , ಬಾಲ್ಯವು ನಮ್ಮ ಜೀವನದಲ್ಲಿ ಸೌಂದರ್ಯ, ಮುಗ್ಧತೆ ನೈಜತೆಗಳಿಂದ ಕೂಡಿದ ಒಂದು ಅದ್ಭುತ ಹಂತ . ಆಟಗಳು ಬಾಲ್ಯದ ಪ್ರಮುಖ ಅಂಶ. ಎಂದು ಹೇಳುತ್ತಾ ಶುಭಾಶಯ ಕೋರಿದರು. ಹಾಗೂ ಮುಖ್ಯೋಪಾಧ್ಯಾಯಿನಿ ಕಾರ್ಯಕ್ರಮದ ಸವಿಸ್ತಾರ ಮಾಹಿತಿ ನೀಡಿದರು. ಅಧ್ಯಕ್ಷರಾಗಿರುವ ಶ್ರೀಮತಿ ಗೀತಾ ಸೇರಿಗಾರ್ ರವರು ಎಲ್ಲರಿಗೂ ಶುಭಾಶಯ ತಿಳಿಸಿ, ಅಧ್ಯಕ್ಷ ನುಡಿಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ಮಾಳ ಗ್ರಾಮ ವ್ಯಾಪ್ತಿಯ ಸುಮಾರು 35 ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು. ಇವರಿಗೆ ವಿವಿಧ ಮನೋರಂಜನಾ ಆಟಗಳನ್ನು ಆಡಿಸಲಾಯಿತು.
ಆಡಳಿತ ಮಂಡಳಿಯ ಸರ್ವ ಸದಸ್ಯರು ,ಶಿಕ್ಷಕರು ,ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



















