
ಕಾರ್ಕಳ :ವಿಶ್ವಹಿಂದು ಪರಿಷದ್ ಬಜರಂಗದಳ ವೀರಮಾರುತಿ ಶಾಖೆ ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಕಾರ್ಕಳ ವತಿಯಿಂದ ದಿನಾಂಕ 07-03-2025 ಬೆಳಿಗ್ಗೆ ಗಂಟೆ 8-30 ರಿಂದ ಶ್ರೀ ಶನಿಪೂಜೆಯ ನಿಮಿತ್ತ ಪುಲ್ಕೇರಿ ಹೋಟೆಲ್ ಮಯೂರ ಇಂಟರ್‌ನ್ಯಾಷನಲ್ ಸಭಾಭವನದಲ್ಲಿ ವೀರಮಾರುತಿ ಶಾಖೆಯ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ರಕ್ತದಾನ ಶಿಬಿರ ನಡೆಯಲಿರುವುದು.
ದಿನಾಂಕ 08-3-2025 ನೇ ಶನಿವಾರದಂದು ಕರಿಯಕಲ್ಲು ಶ್ರೀ ಶನೀಶ್ವರ ಕ್ಷೇತ್ರದಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀ ಶನಿಪೂಜೆ ಜರಗಲಿರುವುದು.ರಾತ್ರಿ 7.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ 8ರಿಂದ ಅನ್ನ ಸಂತರ್ಪಣೆ ಹಾಗೂ 10 ಗಂಟೆಗೆ ಸರಿಯಾಗಿ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು, ಬಾಳ ಮಂಗಳೂರು, ಇವರಿಂದ ಶ್ರೀ ದೇವಿ ಅಗ್ನಿ ಕಲ್ಲುರ್ಟಿ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ






















































