
ಕಾರ್ಕಳ: ಫೆ. 20ರಂದು ತೀರ್ಥಹಳ್ಳಿ ತಾಲೂಕಿನ ಬೆಟ್ಟ ಮಕ್ಕಿಯ ಮನೆಯೊಳಗೆ ಶ್ರೀನಿಧಿ (24) ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೂಲತಃ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಕುದುರುನಬೆಟ್ಟು ನಿವಾಸಿಯಾಗಿರುವ ಶ್ರೀನಿಧಿ ಒಂದು ವರ್ಷದ ಹಿಂದೆ ಬೆಟ್ಟಮಕ್ಕಿಯ ಸುದೀಪ್ ಶೆಟ್ಟಿ ಜೊತೆ ಮದುವೆಯಾಗಿದ್ದರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.