
ಕಾರ್ಕಳ: ಕಾರ್ಕಳ ಎಂ ಪಿ ಎಂ ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಘಟಕ, ಬಾಂಧವ್ಯ ಯುವಕ ಮಂಡಲ ಮಂಗಳಾನಗರ, ಮರ್ಣೆ ಗ್ರಾಮ ಪಂಚಾಯತಿ, ಹಾಗೂ ಶೌರ್ಯ ವಿಪತ್ತು ತಂಡ ಅಜೆಕಾರು ಘಟಕ ಸಹಯೋಗದೊಂದಿಗೆ ಅಜೆಕಾರು ಬಸ್ ನಿಲ್ದಾಣ ದಿಂದ ಎಣ್ಣೆಹೊಳೆ ಏತ ನೀರಾವರಿ ಯೊಜನೆಯ ಪಂಪ್ ಹೌಸ್ ವರೆಗೆ ಒಟ್ಟು ಐದು ಕಿಮೀ ದೂರದ ವರೆಗೆ ಬೃಹತ್ ಸ್ವಚ್ಚತಾ ಆಬಿಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಾರ್ಕಳದ ಮಾಂಜಿ ಅಪ್ಪಿ ಯಣ್ಣ: ಮರ್ಣೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ 50 ವರ್ಷಗಳಿಂದ ರಸ್ತೆ ದುರಸ್ತಿ ಮಾಡುತ್ತಿರುವ 80 ವರ್ಷದ ಹಿರಿಜೀವ ಅಪ್ಪಿಯಣ್ಣ ಯಾನೇ ಶ್ರೀನಿವಾಸ ಮೂಲ್ಯ ಕಾರ್ಯಕ್ರಮ ಉದ್ಘಾಟಿಸಿದರು . ಎನ್ ಎಸ್ ಎಸ್ ಸೇವಾರ್ಥಿಗಳು ಹಾಗೂ ಬಾಂಧವ್ಯ ಯುವಕ ಮಂಡಲದ ಸದಸ್ಯರು, ಹಾಗೂ ಶೌರ್ಯ ವಿಪತ್ತು ತಂಡ ಸದಸ್ಯರು , ಹಾಗೂ ಅಜೆಕಾರು ಎಸ್ ಎಲ್ ಆರ್ ಎಂ ಘಟಕದ ಸದಸ್ಯರು ಸೇರಿದಂತೆ ಒಟ್ಟು129 ಸದಸ್ಯರು
ಸಹಕಾರ ನೀಡಿದರು.
ವಿದ್ಯಾರ್ಥಿ ಗಳೊಂದಿಗೆ ಸಂವಾದ: ಸ್ವಚ್ಚತಾ ಅಭಿಯಾನ ಮುಗಿದ ಬಳಿಕ ವಿದ್ಯಾರ್ಥಿಗಳು ಶ್ರೀನಿವಾಸ ಮುಲ್ಯರ ಜೊತೆ ಸಂವಾದ ನಡೆಸಿದರು. ಬದುಕು ಹಾಗೂ ಅವರ ನಡುವಿನ ಸಾಧನೆಯ ವಿಷಯವನ್ನು ಹಂಚಿಕೊಂಡರು.
ಈ ಕಾರ್ಯಕ್ರಮ ದಲ್ಲಿ ಕಾರ್ಕಳ ಎಂ ಪಿ ಎಂ ಕಾಲೇಜಿನ ಎಸ್ ಎಸ್ ಎಸ್ ಘಟಕದ ಶಿಬಿರ ಅಧಿಕಾರಿಗಳಾದ ಸೌಮ್ಯ, ಪ್ರಸನ್ನ, ಹಾಗೂ ಬಾಂಧವ್ಯ ಯುವಕ ಮಂಡಲದ ಅಧ್ಯಕ್ಷ ಜಯಾನಂದ ಕುಲಾಲ್, ಕಾರ್ಯದರ್ಶಿ ಪ್ರತಾಪ್,ಶೌರ್ಯ ವಿಪತ್ತು ನಿರ್ವಹಣಾ ತಂಡದ ವಿಜಯ ಕಾಮತ್, ಪ್ರವೀಣ್, ಹಾಗೂ ಅಕ್ಷಯ್ ನಾಯಕ್ ಉಪಸ್ಥಿತರಿದ್ದರು. ಎಸ್ ಎಲ್ ಅರ್ ಎಂ ಘಟಕದ ರಿಯಾಜ್ ಉಪಸ್ಥಿತರಿದ್ದರು.