
ಲಯನ್ಸ್ ಕ್ಲಬ್ ಕಾರ್ಕಳ ವಲಯ ಅಧ್ಯಕ್ಷರ ಭೇಟಿ ಹಾಗೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮ ಕಾರ್ಯಕ್ರಮವು ಲಯನ್ಸ್ ಕ್ಲಬ್ ಕಾರ್ಕಳ ಇಲ್ಲಿ ನೆರವೇರಿತು.ಕಾರ್ಯಕ್ಮದ ಅಧ್ಯಕ್ಷತೆಯನ್ನು ಲ.ನಿತ್ಯಾನಂದ ಭಂಢಾರಿಯವರು ವಹಿಸಿಕೊಂಡು ಅತಿಥಿಗಳನ್ನು ಸ್ವಾಗತಿಸಿದರು.ವಲಯಾಧ್ಯಕ್ಷಾದ ಲ.ರಘರಾಮ ಶೆಟ್ಟಿ ಮಾತನಾಡಿ ಲಯನ್ಸ್ “ಸದಸ್ಯರು ತಮ್ಮ ಆತ್ಮತ್ರಪ್ತಿ ಗೋಸ್ಕರ ತಮ್ಮ ಸಮಾಜಸೇವೆಯಲ್ಲಿ ತೊಡಗಿಸಿಗೊಳ್ಳಬೇಕು ಎಂದರು.

ಅತಿಥಿಗಳಾದ ಫಾ.ಸೋಲೋಮೊನ್ ರವರು ಕ್ರಿಸ್ಮಸ್ ಮತ್ತು ಹೊಸ ವರ್ಷದ ಮಹತ್ವ ತಿಳಿಸಿದರು.ಸಮಾರಂಭದಲ್ಲಿ ಅತಿಥಿಗಳ ನ್ನು ಅಧ್ಯಕ್ಷರು ಮತ್ತು ಇತರರು ಸನ್ಮಾನಿಸಿದರು.ಸಮಾರಂಭದಲ್ಲಿ ಪ್ರಾಂತೀಯ ಅಧ್ಯಕ್ಷರಾದ ಲ.ಬೆಳಿಂಜೆ ಹರೀಶ್ ಪೂಜಾರಿ, ಲ.ಉದಯ ಕುಮಾರ್ ಶೆಟ್ಟಿ, ಲ.ತೋಮಸ್ ಲೂಕಸ್ ಉಪಸ್ಥಿತರಿದ್ದರು.ವಿವಿಧ ವಲಯದ ಘಟಕದ ಅಧ್ಯಕ್ಷರು ಮತ್ತು ಕಾರ್ಕಳ ಲಯನ್ಸ್ ಕ್ಲಬ್ ನ ಸದಸ್ಯರು ಮತ್ತು ಕುಟುಂಬದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಲ.ಮಮತಾ ಇವರು ನಿರ್ವಹಿಸಿದ್ದರು.

