ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳಿಗೆ ಸ್ವರ್ಣ ಕಲಾರತ್ನ ಪ್ರಶಸ್ತಿ,

ಕಾರ್ಕಳ: ಸ್ನೇಹ ಜೀವಿ ಫೌಂಡೇಶನ್ ಮುಂಬೈ ಕರ್ನಾಟಕ ಇದರ ಸಹಯೋಗದಲ್ಲಿ 2025 ಜನವರಿ ತಿಂಗಳಲ್ಲಿ ಅಯೋಜಿಸಿದ ಕ್ರೇಜಿ ಟ್ಯಾಲೆಂಟ್ -5 ಅಕ್ಷರ ದೀಪ ವೇದಿಕೆಯಡಿ ನಡೆದ ರಾಷ್ಟ್ರಮಟ್ಟದ ಆನ್ಲೈನ್ ಪ್ರತಿಭಾನ್ವೇಷಣೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ 7ನೇ ತರಗತಿ ವಿದ್ಯಾರ್ಥಿನಿ ನಿರ್ಜರ ಎ.ರಾವ್ ಹಾಗೂ 4ನೇ ತರಗತಿ ವಿದ್ಯಾರ್ಥಿ ಓಂಕಾರ್ ಎ.ರಾವ್ ಸಂಗೀತ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಇವರ ಪ್ರತಿಭೆ ಇನ್ನಷ್ಟು ಉಜ್ವಲವಾಗಲಿ ಎಂದು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ಹಾರೈಸಿದ್ದಾರೆ.