
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 5/02/2025 ರಂದು ಮಕ್ಕಳಿಗೆ ವಿವಿಧ ಆರೋಗ್ಯ ತಪಾಸಣೆಗಳಾದ ಚರ್ಮವ್ಯಾಧಿ,ದಂತ ತಪಾಸಣೆ,ಸಾಮಾನ್ಯ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು .
ಈ ಆರೋಗ್ಯ ತಪಾಸಣಾ ಶಿಬಿರವನ್ನು ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಹಯೋಗದಲ್ಲಿ ನಡೆಸಲಾಯಿತು.ಈ ಶಿಬಿರದಲ್ಲಿ ಚರ್ಮರೋಗ ತಜ್ಞರಾದ ಡಾ.ಅನುಷಾ,ಮಕ್ಕಳ ತಜ್ಞರುಗಳಾದ ಡಾ. ಮಂಜು, ಡಾ.ಜಯಶ್ರೀ ಹಾಗೂ ಡಾ.ಆಶಾ ,ದಂತ ವೈದ್ಯರಾದ ಡಾ. ಶ್ರೀಬಾರವರು ಭಾಗವಹಿಸಿದರು.ಶಾಲೆಯ ಬಾಲಮಂದಿರದಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.





















