ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ 9ನೇ ವರ್ಷದ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ಫೆ. 23 ಆದಿತ್ಯವಾರ , ಬಂಟ್ಸ್ ಹಾಸ್ಟೆಲ್, ಅನಂತಶಯನ ,ಕಾರ್ಕಳ

ಕಾರ್ಕಳ: ಬಂಟರ ಯಾನೆ ನಾಡವರ ಮಾತೃ ಸಂಘ ರಿ. ಮಂಗಳೂರು ಕಾರ್ಕಳ ತಾಲೂಕು ಸಮಿತಿ ಇವರ ಸಹಭಾಗಿತ್ವದಲ್ಲಿ,ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ 9ನೇ ವರ್ಷದ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಫೆ. 23 ಆದಿತ್ಯವಾರ , ಬಂಟ್ಸ್ ಹಾಸ್ಟೆಲ್, ಅನಂತಶಯನ,ಕಾರ್ಕಳ ಇಲ್ಲಿ ನಡೆಯಲಿದೆ.

ಬೆಳಿಗ್ಗೆ 9 ರಿಂದ ಶ್ರೀ ಸತ್ಯನಾರಾಯಣ ಪೂಜೆ, 10 ಗಂಟೆಯಿಂದ ಕಾರ್ಕಳ ಬಂಟ ಮಹಿಳಾ ಸದಸ್ಯರಿಂದ ಭಜನೆ, ಬೆಳಿಗ್ಗೆ 10.30 ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಬೆಳಿಗ್ಗೆ ಗಂಟೆ 11ಕ್ಕೆ ಸಭಾ ಕಾರ್ಯಕ್ರಮ, 1:30ಕ್ಕೆ ಅನ್ನ ಸಂತರ್ಪಣೆ, ಅಪರಾಹ್ನ 2:30 ರಿಂದ ಕಾರ್ಕಳ ಬಂಟ ಮಹಿಳೆಯರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಯಂಕಾಲ 6ಕ್ಕೆ, ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ‘ಕದಂಬ’ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ, ಬಂಟರ ಯಾನೆ ನಾಡವರ ಮಾತೃ ಸಂಘ ರಿ. ಮಂಗಳೂರು ಇದರ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ, ಉದ್ಘಾಟಕರಾಗಿ ಆಸರೆ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ಡಾಕ್ಟರ್ ಆಶಾ ಜ್ಯೋತಿ ರೈ ಮಾಲಾಡಿ, ಮುಖ್ಯ ಅತಿಥಿಗಳಾಗಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಪಂಜುರ್ಲಿ ಸಮೂಹ ಹೋಟೆಲ್, ಮಾಲಕರಾದ ರಾಜೇಂದ್ರ ವಿ ಶೆಟ್ಟಿ, ಶ್ರೀ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಇದರ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್, ಯಕ್ಷದ್ರುವ ಕೇಂದ್ರೀಯ ಮಹಿಳಾ ಘಟಕ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪೂರ್ಣಿಮಾ ಯತೀಶ್ ರೈ, ಬಂಟರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಮಾಜಿ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪೆರ್ವಾಜೆ, ಬಂಟರ ಯಾನೆ ನಾಡವರ ಮಾತೃ ಸಂಘ ರಿ. ಕಾರ್ಕಳ ಇದರ ಸಂಚಾಲಕರಾದ ವಿಜಯ ಶೆಟ್ಟಿ, ಮುಖ್ಯ ಅತಿಥಿಗಳಾಗಿ, ನ್ಯಾಯವಾದಿ ಸುನಿಲ್ ಕುಮಾರ್ ಶೆಟ್ಟಿ, ನ್ಯಾಯವಾದಿ ಮಣಿರಾಜ್ ಶೆಟ್ಟಿ, ಫೆಡರೇಶನ್ ಆಫ್ ಕ್ವಾರಿ ಅಂಡ್ ಸ್ಟೋನ್ ಕೃಶರ್ ಓನರ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಯುವ ಬಂಟರ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಅವಿನಾಶ್ ಜಿ ಶೆಟ್ಟಿ ಮತ್ತಿತರರ ಉಪಸ್ಥಿತಿ ಇರಲಿದೆ.

ಕಾರ್ಯಕ್ರಮದಲ್ಲಿ ಗೌರವ ಸನ್ಮಾನ
ಶಿಕ್ಷಣ ಕ್ಷೇತ್ರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈರಬೆಟ್ಟು ಇದರ ಮುಖ್ಯೋಪಾಧ್ಯಾಯಿನಿ,2024 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಶಶಿಕಲ ಉದಯಕುಮಾರ್ ಶೆಟ್ಟಿ
ನಾಟಿ ವೈದ್ಯ ಕ್ಷೇತ್ರ,: ಶಂಕರ್ ಶೆಟ್ಟಿ ಅಜೆಕಾರು
ವೈದ್ಯಕೀಯ ಕ್ಷೇತ್ರ: ಡಾ. ಸುಜಾತ.ಎ.ಶೆಟ್ಟಿ, ತಾಲೂಕು ಆಯುಷ್ ಆಸ್ಪತ್ರೆ ಕಾರ್ಕಳ
ಸಾಧನ ಕ್ಷೇತ್ರ: ಜೇ.ಸಿ.ಐ ಪ್ರದೀಪ್ ಶೆಟ್ಟಿ ಇನ್ನ , ಸಮಾಜ ಸೇವಕರು
ಕೃಷಿ ಕ್ಷೇತ್ರ: ಆನಂದ ಶೆಟ್ಟಿ , ಕುಂಟಾಡಿ
ರಂಗಭೂಮಿ ಕ್ಷೇತ್ರ: ಪ್ರಶಾಂತ್ ಶೆಟ್ಟಿ ಪರಪ್ಪಾಡಿ, ನಲ್ಲೂರು
ಆಶಾ ಕಾರ್ಯಕರ್ತೆ: ಪ್ರಮೀಳಾ ಶೆಟ್ಟಿ, ತೆಳ್ಳಾರು
ಸಮಾಜ ಸೇವಕ: ವಿಜಯ ಕಡಂಬ ನಿವೃತ್ತ ಬ್ಯಾಂಕ್ ಆಫೀಸರ್, ಕಾರ್ಕಳ ಇವರಿಗೆ ಗೌರವ ಸನ್ಮಾನ ನಡೆಯಲಿದೆ .






















