
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 01/02/2025 ರಂದು ಪ್ರಸಕ್ತ ಸಾಲಿನ 8ನೇ ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ 2025/26ನೇ ಸಾಲಿನ ಶಿಕ್ಷಕ ಪೋಷಕರ ಸಭೆಯನ್ನು ಕರೆಯಲಾಯಿತು.
ಈ ಕಾರ್ಯಕ್ರಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪಠ್ಯ/ ಪಠ್ಯೇತರ ಚಟುವಟಿಕೆಗಳು ಹಾಗೂ ಸ್ಮಾರ್ಟ್ ಕ್ಲಾಸ್ ಬಳಕೆ ಹಾಗೂ ಅದರ ಪ್ರಾತ್ಯಕ್ಷತೆ ಬಗ್ಗೆ ತಿಳಿಸಿ ಪೋಷಕರಿಂದ ಅಭಿಪ್ರಾಯವನ್ನು ಪಡೆಯಲಾಯಿತು.ಈ ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ , ಉಪ ಪ್ರಾಂಶುಪಾಲರಾರ ಶ್ರೀಮತಿ ಸುಜಾತ.ಕೆ, ಪ್ರೌಢಶಾಲಾ ಸಂಯೋಜಕರಾದ ಶ್ರೀಮತಿ ಶ್ರೀಶ ಅಧಿಕಾರಿಯವರು ಮಾಹಿತಿ ನೀಡಿದರು.





















