
ವಿಜಯಪುರ: ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುದ್ದಿಗಾರರ ಜೊತೆ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ನಿರ್ಣಯಿಸಿದ್ದೇವೆ. ಕೋರ್ ಕಮಿಟಿಯಲ್ಲಿ ನನ್ನ ಹೆಸರು ಅಂತಿಮವಾದರೆ ನನ್ನ ಸ್ಪರ್ಧೆ ಖಚಿತ. ಗೆಲುವು ನಿಶ್ಚಿತ. ಬಿಜೆಪಿಯಲ್ಲಿ ಪ್ರಜಾತಂತ್ರ ಇದೆ ಎಂದು ತೋರಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆಯೇ ಇಲ್ಲವೆ ಎಂಬುದು ಕಾಲವೇ ನಿರ್ಧರಿಸಲಿದೆ. ಪ್ರಸ್ತುತ ಅಧ್ಯಕ್ಷರ ಬದಲಾವಣೆ ಮಾಡಬೇಕೆಂಬುದು ಹಲವರ ಒತ್ತಾಯವಾಗಿದೆ. ಕಾರ್ಯಕರ್ತರಲ್ಲಿ ಹುರುಪು ತುಂಬುವರು ಅಧ್ಯಕ್ಷರಾಗಬೇಕು. ಮಾಜಿ ಸಚಿವರಾದ ಜನಾರ್ದನ್ ರೆಡ್ಡಿ, ಶ್ರೀರಾಮುಲು ಕಷ್ಟದಿಂದ ಬಂದಿದ್ದು ಅವರಿಬ್ಬರು ಗೋಡೆ ಒಡೆದು ಒಂದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.





















