
ಗುವಾಹತಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಜನವರಿ 15ರಂದು ಕಾಂಗ್ರೆಸ್ ಪಕ್ಷದ ಹೊಸ ಕಚೇರಿಯನ್ನು ದೆಹಲಿಯ ಕೋಟ್ಲಾ ರಸ್ತೆಯಲ್ಲಿ ಉದ್ಘಾಟಿಸುವ ಮಾತನಾಡಿದ್ದು ಈ ವೇಳೆ ಬಿಜೆಪಿ ಹಾಗೂ ಆರೆಸ್ಸೆಸ್ ದೇಶದ ಪ್ರತಿಯೊಂದು ಸಂಘ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂಬ ಹೇಳಿಕೆ ನೀಡಿದ್ದು ಇದೀಗ ಅವರ ವಿರುದ್ಧ ಅಸ್ಸಾಂ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರು ಸ್ವೀಕಾರಾರ್ಹ ಮುಕ್ತ ವಾಕ್ ಸ್ವಾತಂತ್ರದ ಗಡಿಯನ್ನು ದಾಟಿದ್ದಾರೆ ಹಾಗೂ ಸಾರ್ವಜನಿಕ ವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ಧತೆಗೆ ಅಪಾಯ ತರುವ ಮಾತುಗಳನ್ನಾಡಿದ್ದಾರೆ ಎಂದು ದೂರುದಾರ ಮಂಜೀತ್ ಚೇಟಿಯಾ ಅವರು ಆರೋಪಿಸಿದ್ದಾರೆ.





















