
ರಾಯಚೂರು: ಚಿಂತಕ, ಯುವ ಬ್ರಿಗೆಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರ ಮುಸ್ಲಿಮರ ನಿಯಂತ್ರಣದಲ್ಲಿದೆ. ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ ಎಂದು ಹೇಳುವಾಗ ಇನ್ನೂ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ವ್ಯಂಗ್ಯವಾಡಿದರು.
ನಾವೆಲ್ಲ ಪೂಜಿಸುವ ಗೋವಿನ ಕೆಚ್ಚಲು ಕತ್ತರಿಸಿದವನಿಗೆ ಹುಚ್ಚ ಎನ್ನುವ ಪಟ್ಟ ಕಟ್ಟಲಾಗುತ್ತಿದೆ. ಆ ಹುಚ್ಚನಿಗೆ ಗೋವಿನ ಕೆಚ್ಚಲನ್ನೆ ಯಾಕೆ ಕಡಿಯಬೇಕು ಎನಿಸಿತು. ನಾಯಿಯದ್ದೊ ಮತ್ಯಾವುದೋ ಪ್ರಾಣಿಯದ್ದು ಯಾಕೆ ಕಡಿಯಬೇಕು ಎನಿಸಿಲಿಲ್ಲ. ಆತನಿಗೆ ಈ ಆಲೋಚನೆ ಬಂದಿದ್ದು ಯಾವ ಪ್ರಾರ್ಥನಾ ಮಂದಿರದಿಂದ ಎನ್ನುವುದನ್ನು ಸರ್ಕಾರ ತಿಳಿಸಬೇಕು. ಮುಸ್ಲಿಮರು ತಪ್ಪು ಮಾಡಿದರೆ ಅವರು ಹುಚ್ಚರು, ದಡ್ಡರಾಗಿರುತ್ತಾರೆ. ಅದೆ ಬೇರೆ ಧರ್ಮಿಯರು ಮಾಡಿದಾಗ ವ್ಯವಸ್ಥಿತವಾಗಿ ಮಾಡಿರುತ್ತಾರೆ ಎಂದು ಬಿಂಬಿಸಲಾಗುತ್ತಿದೆ. ಹಿಂದು ಧರ್ಮದ ಆರಾಧನೆಗಳಿಗೆ ಅಪಮಾನ ಮಾಡಿದವರಿಗೆ ಹುಚ್ಚರೆಂಬ ಸಮಜಾಯಿಷಿ ಕೊಡುತ್ತೀರಿ ಎಂದರೆ ಸರ್ಕಾರ ಯಾವ ಮನಸ್ಥಿತಿಯಲ್ಲಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಕುಟುಕಿದರು.
ಮುಸ್ಲಿಮರು ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎನ್ನುವ ಪ್ರಮುಖ ಅಜೆಂಡಾದಲ್ಲಿದ್ದು ಅವರಲ್ಲಿ ತಮ್ಮಿಂದ ಸಮಾಜಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾಳಜಿ ಕಾಣುವುದಿಲ್ಲ. ಕೊರೊನಾ ವೇಳೆ ಎಲ್ಲರೂ ಮನೆಯಲ್ಲಿದ್ದರೆ ಅವರು ಮಾತ್ರ ನಾವು ಸಾಮೂಹಿಕ ಪ್ರಾರ್ಥನೆ ಮಾಡಿಯೇ ಸಿದ್ಧ ಎನ್ನುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





















