
ತಡರಾತ್ರಿ ಮನೆಗೆ ನುಗ್ಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಬೈ ಪೋಲಿಸರು ಸೈಫ್ ಮೇಲಿನ ಅಟ್ಯಾಕ್ ಬೆನ್ನಲ್ಲೇ ದಾಳಿಕೋರನ ಹುಡುಕಲು 20 ತಂಡ ರಚಿಸಿ ಬಲೆ ಬೀಸಿದ್ದು ಕೊನೆಗೂ ದಾಳಿಕೋರನನ್ನು ನಿನ್ನೆ ತಡರಾತ್ರಿ ಅರೆಸ್ಟ್ ಮಾಡಿದ್ದಾರೆ.
ಇದು ದರೋಡೆ ಮಾಡಲು ಈ ಕೃತ್ಯ ಎಸಗಿದ್ದ ಅಥವಾ ಕೊಲೆ ಮಾಡುವ ಹುನ್ನಾರ ಇತ್ತಾ? ಎಂಬುದನ್ನು ತಿಳಿಯಲು ವಿವಿಧ ರೀತಿಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.





















