ಕೇಮಾರು ಶ್ರೀ ಮತ್ತು ಶಾಸಕ ವಿ. ಸುನಿಲ್ ಕುಮಾರ್ ಉಪಸ್ಥಿತಿ
ಸ್ವರ್ಣಾ ಪಾವಿತ್ರ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಆಶಯದಲ್ಲಿ 5ನೇ ವರ್ಷದ ಸ್ವರ್ಣಾರತಿ ಕಾರ್ಯಕ್ರಮ ಜನವರಿ 14 ಮಂಗಳವಾರ ಸಂಜೆ 6ಗಂಟೆಗೆ ಮಾಳ ಮುಡಾರು ಗ್ರಾಮದ ಕಡಾರಿ ಸೇತುವೆಯ ಬಳಿ ಸ್ವರ್ಣಾ ನದಿ ತೀರದಲ್ಲಿ ನೆರವೇರಿತು.
ಕಡಾರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದಿಂದ ಸ್ವರ್ಣಾ ನದಿ ತೀರದವರೆಗೆ ಮೆರವಣಿಗೆ, ನದಿಪೂಜೆ, ದೀಪಾಲಂಕಾರ, ಬಾಗಿನ ಸಮರ್ಪಣೆ,ಸ್ವರ್ಣಾರತಿ ಕಾರ್ಯಕ್ರಮಗಳು ಜರುಗಿತು. ನಂತರ ಸಭಾ ಕಾರ್ಯಕ್ರಮ ಹಾಗೂ ವಿಶೇಷ ಆಕರ್ಷಣೆಯಾಗಿ ಕುವೆಂಪು ವಿರಚಿತ ಕಾನೂರು ಸುಬ್ಬಮ್ಮ ಹೆಗ್ಗಡತಿ ಕೃತಿಯ ಸುಬ್ಬಮ್ಮ ಪಾತ್ರದ ಭಾವಾಭಿವ್ಯಕ್ತಿ ನಡೆಯಿತು. ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕಾರ್ಕಳದ ಜನಪ್ರಿಯ ಶಾಸಕರಾದ . ವಿ. ಸುನಿಲ್ ಕುಮಾರ್ ಹಾಗೂ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಉಪಸ್ಥಿತರಿದ್ದರು.




















