28 C
Udupi
Monday, May 4, 2026
spot_img
spot_img
HomeBlogತರುಣ ಭಾರತ ಚಾರಿಟೇಬಲ್ ಟ್ರಸ್ಟ್ ರಿ. ಹೆರ್ಮುಂಡೆ ,ಕಾರ್ಕಳ

ತರುಣ ಭಾರತ ಚಾರಿಟೇಬಲ್ ಟ್ರಸ್ಟ್ ರಿ. ಹೆರ್ಮುಂಡೆ ,ಕಾರ್ಕಳ

ಶಿಷ್ಯ ವೃಂದದಿಂದ ಪ್ರೊ. ಮಿತ್ರ ಪ್ರಭಾ ಹೆಗ್ಡೆಯವರಿಗೆ ಪೂರ್ಣ ಕುಂಭ ಸ್ವಾಗತ

ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಹೆರ್ಮುಂಡೆ, ಕಾರ್ಕಳ ತಾಲೂಕು, ಉಡುಪಿ – 574101 ಇದರ ಮುಂಬಯಿ ಶಾಖೆಯ ಉದ್ಘಾಟನೆ ಮತ್ತು ತುಳು ಲಿಪಿ ಅಕ್ಷರಾಭ್ಯಾಸ ವರ್ಗದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.)  ಹೆರ್ಮಂಡೆ ಇದರ ಶಾಖೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿಯ ಅಧ್ಯಕ್ಷರಾದ  ಪ್ರೊ. ಮಿತ್ರ ಪ್ರಭಾ ಹೆಗ್ಡೆಯವರು ಗಣ್ಯರ ಸಮ್ಮುಖದಲ್ಲಿ ನೆರವೇರಿಸಿದರು. ಆ ಬಳಿಕ ಸಭಾ ಕಾರ್ಯಕ್ರಮವನ್ನು ನವೋದಯ  ಕನ್ನಡ ಸೇವಾ ಸಂಘ (ರಿ.) ಥಾಣೆ ಇವರ ಸಂಚಾಲಿತ ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜಿನ ಸಭಾಗೃಹದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ದೀಪ ಪ್ರಜ್ವಲಿಸುವ ಮೂಲಕ ನೆರವೇರಿಸಲಾಯಿತು.


ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ಸತೀಶ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಪ್ರೊ. ಮಿತ್ರ ಪ್ರಭಾ ಹೆಗ್ಡೆ, ಶ್ರೀ ಪ್ರಕಾಶ್ ಆಳ್ವ, ಗೌರವ ಅಧ್ಯಕ್ಷರು ತುಳು ಕೂಟ ಐರೋಲಿ, ಶ್ರೀ ಮನೋಜ್ ಎಲ್. ಹೆಗ್ಡೆ, ಅಧ್ಯಕ್ಷರು ಹೆಗ್ಗಡೆ ಸೇವಾ ಸಂಘ (ರಿ.) ಮುಂಬಯಿ, ಶ್ರೀ ಸುರೇಂದ್ರ ಕುಮಾರ್ ಶೆಟ್ಟಿ, ಮಾರ್ನಾಡು, ಮುಂಬಯಿ ಸಂಚಾಲಕರು ಟೀಮ್ ಐ ಲೇಸಾ, ಶ್ರೀ ಜಯರಾಮ ಪೂಜಾರಿ, ಅಧ್ಯಕ್ಷರು ಶ್ರೀ ಅಯ್ಯಪ್ಪ ಸೇವಾ ಸಮಿತಿ (ರಿ.) ಕಿಸನ್ ನಗರ, ಶ್ರೀಮತಿ ನಯನ ಶೆಟ್ಟಿ, ಕಾರ್ಯಧ್ಯಕ್ಷರು ಮಹಿಳಾ ವಿಭಾಗ, ಕನ್ನಡ ಸೇವಾ ಸಂಘ (ರಿ.) ಥಾಣೆ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಕಳದ  ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ. ಮಿತ್ರಪ್ರಭಾ ಹೆಗ್ಡೆಯವರ ಆಗಮನದ ಸುದ್ದಿ ಅರಿತ ಅವರ ಶಿಷ್ಯ ವೃಂದದವರು ಮುಂಬೈಯ ದೂರ ದೂರದ ಕಡೆಗಳಿಂದ ಆಗಮಿಸಿ ತಮ್ಮ ಗುರುಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಿ, ಸನ್ಮಾನಿದರು.
ಈ ಸುಸಂದರ್ಭದಲ್ಲಿ ನವೋದಯ ಕನ್ನಡ ಸೇವಾ ಸಂಘ (ರಿ.) ಥಾಣೆ ಇದರ ಸ್ಥಾಪಕ ಕಾರ್ಯದರ್ಶಿ ಹಾಗು ಮಾಜಿ ಅಧ್ಯಕ್ಷರಾದ ಶ್ರೀ ಕೆ. ಎಸ್. ಬಂಗೇರ, ಮಾಜಿ ಅಧ್ಯಕ್ಷರಾದ ಶ್ರೀ ಜಯ ಕೆ. ಶೆಟ್ಟಿ, ಪದಾಧಿಕಾರಿಗಳಾದ ಶ್ರೀ ಶಶಿಧರ ಶೆಟ್ಟಿ, ಶ್ರೀ ಸುನಿಲ್ ಶೆಟ್ಟಿ, ಶ್ರೀ ಪ್ರಶಾಂತ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಶೇಖರ ಹೆಗ್ಡೆ, ಶ್ರೀ ದಯಾನಂದ ಹೆಗ್ಡೆ, ಮಹಿಳಾ ವಿಭಾಗದ ಶ್ರೀಮತಿ ರೇಣುಕಾ ಜಯನಂದ ದೇವಾಡಿಗ, ಮಾದ್ಯಮ ಮತ್ತು ಸಂವಹನ ವಿಭಾಗದ ಶ್ರೀ ಮನೋಜ್ ಶೆಟ್ಟಿ ನಕ್ರೆ, ಕಾರ್ಯಕಾರಿ ಸಮಿತಿಯ ಸದಸ್ಯರು, ಪ್ರೊ. ಮಿತ್ರಪ್ರಭಾ ಹೆಗ್ಡೆಯವರ ಹಳೆ ವಿದ್ಯಾರ್ಥಿವೃಂದ, ತರುಣ ಭಾರತ ಬಲೆ ತುಳು ಲಿಪಿ ಕಲ್ಪುಗ ಅಭ್ಯಾಸ ವರ್ಗದಲ್ಲಿ ಭಾಗವಹಿಸಿದ ಸದಸ್ಯರು ಮತ್ತು ತರುಣ ಭಾರತ ಚಾರಿಟೇಬಲ್ ಟ್ರಸ್ಟಿನ ಹೆರ್ಮುಂಡೆ ಗ್ರಾಮದ ಹಿತೈಷಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಕುll ಮೇಘ ಬಂಗೇರ, ಮಾll ಆರ್ಯನ್ ದೇವಾಡಿಗ, ಮಾll ನಿರೇಶ್ ಪೂಜಾರಿ ಪ್ರಾರ್ಥನೆ, ಶ್ರೀಮತಿ ಪ್ರತಿಭಾ ಶೆಟ್ಟಿ ಸ್ವಾಗತ, ಶ್ರೀಮತಿ ಪ್ರವೀಣಿ ಸಾಲ್ಯಾನ್ ಮುಖ್ಯ ಅತಿಥಿಗಳ ಪರಿಚಯ, ಶ್ರೀಮತಿ ಪುಷ್ಪ ದೇವಾಡಿಗ ತುಳು ಲಿಪಿ ಅಕ್ಷರಾಭ್ಯಾಸ ಸಾಧಕರ ಅಭಿನಂದನೆಯ ನಿರ್ವಹಣೆ, ಸಿ. ಎ. ರಾಜಶ್ರೀ ಶೆಟ್ಟಿ ತುಳು ಲಿಪಿ ಕಲಿಕಾ ಅವಧಿಯ ಅನುಭವ, ಡಾll ಪೂರ್ಣಿಮಾ ಶೆಟ್ಟಿಯವರು ‌ತಮ್ಮ ಗುರುಗಳ ಸನ್ಮಾನ ಕಾರ್ಯಕ್ರಮದ ನಿರ್ವಹಣೆ, ಶ್ರೀಮತಿ ಶೋಭ ಶೆಟ್ಟಿ ಧನ್ಯವಾದ ಮತ್ತು ಶ್ರೀಮತಿ ಸುಗಂಧಿ ಹೆಗ್ಡೆ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಅಂತಿಮಗೊಳಿಸಲಾಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page