28 C
Udupi
Monday, May 4, 2026
spot_img
spot_img
HomeBlogಪತಿಯೊಂದಿಗೆ ವಾಸಿಸದಿದ್ದರೂ ಜೀವನಾಂಶ ಪಡೆಯಲು ಪತ್ನಿ ಅರ್ಹಳು: ಸುಪ್ರೀಂ ಕೋರ್ಟ್ ತೀರ್ಪು

ಪತಿಯೊಂದಿಗೆ ವಾಸಿಸದಿದ್ದರೂ ಜೀವನಾಂಶ ಪಡೆಯಲು ಪತ್ನಿ ಅರ್ಹಳು: ಸುಪ್ರೀಂ ಕೋರ್ಟ್ ತೀರ್ಪು

ಮುಖ್ಯ ನ್ಯಾಯಮೂರ್ತಿ (CJI) ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಮಹಿಳೆ ತನ್ನ ಪತಿಯೊಂದಿಗೆ ವಾಸಿಸಲು ನಿರಾಕರಿಸಲು ಸರಿಯಾದ ಕಾರಣಗಳಿದ್ದರೆ, ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಜಾರ್ಖಂಡ್‌ನ ವಿಚ್ಛೇದಿತ ದಂಪತಿಗಳು ಮೇ 1, 2014 ರಂದು ವಿವಾಹವಾಗಿದ್ದು ಆದರೆ ಆಗಸ್ಟ್ 2015 ರಲ್ಲಿ ಬೇರ್ಪಟ್ಟ ಪ್ರಕರಣದಲ್ಲಿ ಪೀಠವು ಅಧಿಕೃತ ತೀರ್ಪು ನೀಡಿತು.

ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಪತಿ ರಾಂಚಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು ಮತ್ತು ಅವರು ಆಗಸ್ಟ್ 21, 2015 ರಂದು ಆಕೆ ಗಂಡನ ಮನೆಯನ್ನು ತೊರೆದಿದ್ದಳು. ಅವಳನ್ನು ಮರಳಿ ಕರೆತರಲು ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ನಂತರ ಹಿಂತಿರುಗಲಿಲ್ಲ ಎಂದು ಪತಿ ಹೇಳಿದ್ದಾರೆ.

ಕಾರು ಖರೀದಿಸಲು 5 ಲಕ್ಷ ರೂ. ಹಣ ಕೊಡಬೇಕು ಎಂದು ಪತಿ ಪೀಡಿಸಿ ಚಿತ್ರಹಿಂಸೆ ನೀಡುತ್ತಿದ್ದು ಅಲ್ಲದೆ ಆತನಿಗೆ ವಿವಾಹೇತರ ಸಂಬಂಧವಿದ್ದು, 2015ರ ಜನವರಿ 1 ರಂದು ತನಗೆ ಗರ್ಭಪಾತವಾಗಿತ್ತು, ಆದರೆ ಪತಿ ತನ್ನನ್ನು ನೋಡಲು ಬರಲಿಲ್ಲ. ಅಲ್ಲದೆ ಈ ಮೊದಲು ನನಗೆ ವಾಶ್ರೂಂ ಬಳಸಲು ಕೂಡ ಅನುಮತಿ ಇರಲಿಲ್ಲ, ಹಾಗೆಯೇ ಮನೆಯ ಗ್ಯಾಸ್ ಬಳಸಲು ಅನುಮತಿ ನೀಡಿದರೆ ಮನೆಗೆ ಬರುತ್ತೇನೆ ಎಂದು ಹೇಳಿದ್ದಳು. ಕೌಟುಂಬಿಕ ನ್ಯಾಯಾಲಯವು 2022ರಲ್ಲಿ ಪತಿಯೊಂದಿಗೆ ವಾಸಿಸುವಂತೆ ಆದೇಶ ನೀಡಿತ್ತು. ಆಕೆ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಕುಟುಂಬ ನ್ಯಾಯಾಲಯವು ತಿಂಗಳಿಗೆ 10,000 ರೂ ಜೀವನಾಂಶವನ್ನು ಪತ್ನಿಗೆ ಆಕೆಯ ಪತಿಯಿಂದ ಪಾವತಿಸಲು ಆದೇಶಿಸಿತ್ತು.

ಆದರೆ ಕೋರ್ಟ್ ಜೀವನಾಂಶ ಕೊಡಬೇಕು, ಆಕೆ ಮನೆಗೆ ಬರಬೇಕೆಂದು ತೀರ್ಪು ನೀಡಿದ್ದರೂ ಆಕೆ ಮನೆಗೆ ಬಂದಿಲ್ಲ ಎಂದು ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು ಬಳಿಕ ಪತ್ನಿ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದೇಶದಿಂದ ನೊಂದ ಪತ್ನಿ ಸುಪ್ರೀಂ ಕೋರ್ಟ್‌ನಲ್ಲಿ ಆದೇಶವನ್ನು ಪ್ರಶ್ನಿಸಿದ್ದು, ಇದರ ವಿಚಾರಣೆ ನಡೆಸಿದ ಪೀಠವು ಪತ್ನಿ ದೂರವಿದ್ದರೂ ಜೀವನಾಂಶ ಪಾವತಿಸಬೇಕೆಂದು ಆದೇಶ ಹೊರಡಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page