28.9 C
Udupi
Monday, May 4, 2026
spot_img
spot_img
HomeBlogನಾನು ಕೂಡ ಮನುಷ್ಯ, ಸಹಜ ತಪ್ಪು ಮಾಡಿದ್ದೇನೆ: ನರೇಂದ್ರ ಮೋದಿ ಮನದಾಳದ ಮಾತು

ನಾನು ಕೂಡ ಮನುಷ್ಯ, ಸಹಜ ತಪ್ಪು ಮಾಡಿದ್ದೇನೆ: ನರೇಂದ್ರ ಮೋದಿ ಮನದಾಳದ ಮಾತು

ನವದೆಹಲಿ: ಕರ್ನಾಟಕ ಮೂಲದ ಯುವ ಉದ್ಯಮಿ ಝೆರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್ ಕಾಸ್ಟ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ನಾನೇನು ದೇವರಲ್ಲ ನಾನು ಕೂಡ ಮನುಷ್ಯನಾಗಿ ಸಹಜ ತಪ್ಪು ಮಾಡಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಹಲವು ವಿಚಾರಗಳನ್ನು ನಿಖಿಲ್ ಕಾಮತ್ ನಡೆಸಿಕೊಡುವ ಪೀಪಲ್ ಬೈ ಡಬ್ಲ್ಯೂಟಿಎಫ್ ಪಾಡ್ ಕಾಸ್ಟ್ ನಲ್ಲಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ರಾಜಕೀಯಕ್ಕೆ ಸೇರಲು ಇಚ್ಛಿಸುವ ಯುವಕರಿಗೆ ಸಲಹೆ ನೀಡಿದ್ದಾರೆ.

ಯಾವಾಗಲೂ ಒಳ್ಳೆಯ ಜನರು ರಾಜಕಾರಣಿಗಳಾಗಬೇಕು. ಕೇವಲ ಮಹತ್ವಕಾಂಕ್ಷೆಯೊಂದಿಗೆ ರಾಜಕೀಯಕ್ಕೆ ಸೇರಬೇಕು. ಗುಜರಾತ್ ಸಿಎಂ ಆಗಿದ್ದ ಸಂದರ್ಭದಲ್ಲಿ ನಾನು ಕೂಡ ಮನುಷ್ಯ ಸಹಜ ತಪ್ಪು ಮಾಡಿದ್ದೇನೆ, ನಾನೇನು ದೇವರಲ್ಲ ಎಂದಿದ್ದಾರೆ.

ಇದಲ್ಲದೆ ಪ್ರಸ್ತುತ ದಿನಗಳಲ್ಲಿ ವಿಶ್ವದಾದ್ಯಂತ ಸಂಭವಿಸುತ್ತಿರುವ ಯುದ್ಧಗಳ ಬಗ್ಗೆ ಚರ್ಚಿಸಿದ ಅವರು ‘ಭಾರತ ಈಗ ತಟಸ್ಥವಲ್ಲ ಶಾಂತಿಯ ಕಡೆ ಇರುತ್ತದೆ’ ಎಂದು ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page