28.9 C
Udupi
Monday, May 4, 2026
spot_img
spot_img
HomeBlogಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ, "ಪ್ರಕೃತಿ ಸಂಭ್ರಮೋತ್ಸವ - 2025"

ಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ, “ಪ್ರಕೃತಿ ಸಂಭ್ರಮೋತ್ಸವ – 2025”

ಪ್ರಸ್ತುತ ವಿದ್ಯಾರ್ಥಿಗಳಿಗೆ ಶಿಸ್ತಿನ ಜೊತೆ ಸಂಸ್ಕಾರ ಅವಶ್ಯಕ: ಶಾಸಕ ಉಮಾನಾಥ ಕೋಟ್ಯಾನ್

ಕಾಂತಾವರ, ಜ 7 ರಂದು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪ್ರಕೃತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 2024-25 ನೆಯ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ಪ್ರಕೃತಿ ಸಂಭ್ರಮೋತ್ಸವವು ಸಂಸ್ಥೆಯ ಸಂಸ್ಥಾಪಕ ಶ್ರೀಯುತ ಕ್ರಿಸ್ಪಿನ್ ಜೆರಾಲ್ಡ್ ಕ್ರಾಸ್ತಾ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಪ್ರಾರ್ಥನೆಯೊಂದಿಗೆ ಸಂಸ್ಥೆಯ ಆವರಣದಲ್ಲಿ ಆರಂಭಗೊಂಡ 13 ನೆಯ ಪ್ರಕೃತಿ ಸಂಭ್ರಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಮುಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಉಮಾನಾಥ ಕೋಟ್ಯಾನ್ ಅವರು “ಹಿಂದಿನ ಮತ್ತು ಇಂದಿನ ಶಿಕ್ಷಣದಲ್ಲಿಯಾದ ಪರಿವರ್ತನೆ ಹಾಗೂ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೀತಿ, ಧರ್ಮ, ಸಂಸ್ಕಾರ, ಸಂಸ್ಕೃತಿ ಬಹಳ ಅಗತ್ಯವಾದುದು. ಈ ನಿಟ್ಟಿನಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರವೂ ಅವಶ್ಯಕವಾಗಿದೆ” ಎಂದು ನುಡಿದರು. ಕಾರ್ಯಕ್ರಮದ ಗೌರವ ಅತಿಥಿ ಅಡ್ವೋಕೇಟ್ ಶ್ರೀಮತಿ ಶ್ವೇತಾ ಜೈನ್ ಅವರು ” ಪ್ರಕೃತಿ ಸಂಭ್ರಮೋತ್ಸವವು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಉತ್ತಮ ವೇದಿಕೆಯಾಗಿದೆ ಹಾಗೂ ಇದು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸಮಾಜದ ಮುನ್ನಳೆಯಲ್ಲಿ ಗುರುತಿಸಿಕೊಳ್ಳಲು ಅನುಕೂಲವಾಗಲಿದೆ” ಎಂದು ಹೇಳಿದರು. ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಯುತ ಭಾಸ್ಕರ್. ಟಿ ಇವರು ಮಾತನಾಡಿ ” ಶಿಕ್ಷಣದಲ್ಲಿ ಗುಣಾತ್ಮಕ ಅಂಶಗಳು ಅತಿ ಅವಶ್ಯಕ ಮತ್ತು ಗುಣಾತ್ಮಕ ಶಿಕ್ಷಣಕ್ಕೆ ಪ್ರಕೃತಿ ಶಿಕ್ಷಣ ಸಂಸ್ಥೆಯು ಮಾದರಿಯಾಗಿದೆ” ಎಂದು ನುಡಿದರು. ಪ್ರಕೃತಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಶ್ರೀಯುತ ಪ್ರೊಫೆಸರ್ ಪದ್ಮನಾಭ ಗೌಡ ರವರು ” ವಿದ್ಯಾರ್ಥಿಗಳ ಕಲಿಕೆಗೆ ಸೂಕ್ತ ವಾತಾವರಣದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಕೃತಿ ಶಿಕ್ಷಣ ಸಂಸ್ಥೆಯು ಮಾದರಿಯಾಗಿದೆ. ಇಂತಹ ಸಂಸ್ಥೆಯನ್ನು ಸಮಾಜಕ್ಕೆ ನೀಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಕ್ರಿಶ್ಪಿನ್ ಜೆರಾಲ್ಡ್ ಕ್ರಾಸ್ತಾ ಅವರ ಕೊಡುಗೆ ಸ್ಮರಣೀಯವಾದುದು” ಎಂದು ನುಡಿದರು.
ಪ್ರಕೃತಿ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಕಾಂತಾವರ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ರಾಜೇಶ್ ಕೋಟ್ಯಾನ್, ಶಾಸಕ ಉಮಾನಾಥ್ ಕೋಟ್ಯಾನ್ ಅವರ ಕಾರ್ಯದರ್ಶಿ ಶ್ರೀಯುತ ರಂಜಿತ್ ಪೂಜಾರಿ, ಪ್ರಕೃತಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಚಾರ್ಲ್ಸ್ ಕ್ರಾಸ್ತಾ, ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ರೂಪಾ ಭಂಡಾರಿ, ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀಯುತ ಮಧುಸೂದನ್ ಶಿಂದೆ, ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ಜಯಂತ. ಎನ್. ಭಂಡಾರಿ ಹಾಗೂ ಶಾಲಾ ನಾಯಕ ಪೃಥ್ವಿನ್ ಪೂಜಾರಿ ಇವರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ 2024-25 ನೆಯ ಸಾಲಿನಲ್ಲಿ ಪಠ್ಯ- ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ, ಬಹುಮಾನಗಳನ್ನು ನೀಡಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಅಭ್ಯಾಗತರನ್ನು ಸಂಸ್ಥೆಯ ಅಧ್ಯಾಪಕಿ ಶ್ರೀಮತಿ ರೌನಕ್ ಆರ ಇವರು ಸ್ವಾಗತಿಸಿ, ಸಂಸ್ಥೆಯ ಅಧ್ಯಾಪಕಿಯರಾದ ಶ್ರೀಮತಿ ಮಮತಾ ಮತ್ತು ಶ್ರೀಮತಿ ಜೂಲಿಯಾನ ಇವರುಗಳು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಾರ್ಷಿಕ ವರದಿಯನ್ನು ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಮಧುಸೂಧನ್ ಶಿಂದೆ ಇವರು ವಾಚಿಸಿದರು. ಸಂಸ್ಥೆಯ ಅಧ್ಯಾಪಕಿ ಶ್ರೀಮತಿ ಜಯ ಶೆಣೈ ಇವರು ವಂದನಾರ್ಪಣೆ ಗೈದರು. ಸಂಸ್ಥೆಯ ಅಧ್ಯಾಪಕಿ ಕುಮಾರಿ ಶುಭಾಷಿಣಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page