
ಬೀದರ್: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬೀದರ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಡಿನ್ನರ್ ಪಾರ್ಟಿ ಮಾಡಿದ್ದು ಮುಖ್ಯಮಂತ್ರಿ ಗದ್ದುಗೆ ವಿಷಯಕ್ಕಲ್ಲ. ವಿಪಕ್ಷಗಳ ಕೈಯಲ್ಲಿ ಯಾವ ಅಸ್ತ್ರವೂ ಇಲ್ಲ, ಸುಮ್ನೆ ಹೇಳಬೇಕು ಅಂತಾ ಹೇಳ್ತಾರೆ. ಮೊನ್ನೆಯಷ್ಟೆ ಮೂರು ಚುನಾವಣೆ ಸೋತಿದ್ದಾರೆ, ಬಿಜೆಪಿ ಅವರಿಗೆ ಕೆಲಸ ಇಲ್ಲ ಅಷ್ಟೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ, ಅಧ್ಯಕ್ಷರು, ಜಿ.ಪರಮೇಶ್ವರ್ ಎಲ್ಲರೂ ಕರೀತಾರೆ ಹಾಗಾದ್ರೆ ನಾವ್ಯಾರು ಊಟಕ್ಕೆ ಹೊಗಬಾರದಾ ಎಂದು ಪ್ರಶ್ನಿಸಿದ ಸತೀಶ್ ಜಾರಕಿಹೊಳೆ ಪರಮೇಶ್ವರ್ ಅವರು ಶೋಷಿತ ಸಮುದಾಯದ ಸಚಿವ, ಶಾಸಕರನ್ನು ಊಟಕ್ಕೆ ಕರೆದಿದ್ದಾರೆ. ಈಗ ಅವಕಾಶ ಇದೆ ಹೋಗ್ತೇವೆ. ಅಷ್ಟಕ್ಕೂ ದಲಿತ ಮುಖ್ಯಮಂತ್ರಿ ವಿಚಾರ ಈಗ ಅಪ್ರಸ್ತುತ ಎಂದು ಹೇಳಿದರು.



















