31.6 C
Udupi
Monday, May 4, 2026
spot_img
spot_img
HomeBlogಜಾಗೃತಿ ಸಾಹಿತ್ಯಸಕ್ತ ಮಹಿಳಾ ಸಂಘಟನೆ ಕಾರ್ಕಳ ಇದರ ತಿಂಗಳ ಕಾರ್ಯಕ್ರಮ

ಜಾಗೃತಿ ಸಾಹಿತ್ಯಸಕ್ತ ಮಹಿಳಾ ಸಂಘಟನೆ ಕಾರ್ಕಳ ಇದರ ತಿಂಗಳ ಕಾರ್ಯಕ್ರಮ

2024ನೇ ಸಾಲಿನಲ್ಲಿ ಪ್ರಕಟವಾದ ಜಾಗೃತಿಯ ಸದಸ್ಯರ ಕೃತಿಗಳ ಅವಲೋಕನ

ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ತಿಂಗಳ ಕಾರ್ಯಕ್ರಮದಲ್ಲಿ 2024ನೇ ಸಾಲಿನಲ್ಲಿ ಪ್ರಕಟವಾದ ಜಾಗೃತಿಯ   ಸದಸ್ಯೆಯರ  ಕೃತಿಗಳ ಅವಲೋಕನ ಬೋರ್ಡ್ ಹೈಸ್ಕೂಲ್
  ಇದರ ಸಭಾಂಗಣದಲ್ಲಿ  ನೆರವೇರಿತು. 2024ನೇ ವರ್ಷದಲ್ಲಿ ಪ್ರಕಟವಾದ ಕೃತಿಗಳ ಲೇಖಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶ್ರೀಮತಿ ಸಾವಿತ್ರಿ ಮನೋಹರ್ ರವರು ತಮ್ಮ “ಪಂಚ ಪ್ರಹಸನಗಳು” ಕೃತಿಯ  ರಚನೆಗೆ ಪ್ರೇರಣೆ ನೀಡಿದ ಘಟನೆಗಳನ್ನು ಹಂಚಿಕೊಂಡರು. ಶ್ರೀಮತಿ ಅನುಪಮಾ ಚಿಪ್ಲೂಂಣಕರ್ ರವರು ತಮ್ಮ “ಅಮ್ಮ”ಕೃತಿಯ ಬಗ್ಗೆ  ತಾಯಿಯ ಪ್ರೀತಿಯ ಅನುಬಂಧವನ್ನು ಮೆಲುಕು ಹಾಕಿದರು..ಶ್ರೀಮತಿ ಶೈಲಜಾ ಹೆಗ್ಡೆಯವರು ತಮ್ಮ “ಭಾವ ಲಹರಿ”ಕೃತಿಯ ಬಿಡುಗಡೆಯ ಅವಿಸ್ಮರಣೀಯ ಅನುಭವವನ್ನು ಬಿಚ್ಚಿಟ್ಟರು.ಡಾ.ಸುಮತಿ ಪಿ .ಯವರು ತಮ್ಮ “ಚಿಗುರ ಸೊಬಗು” ಮತ್ತು  “ಮೌನ ವೀಣೆ ಕೃತಿಯ  ಹುಟ್ಟಿನ ಪ್ರೇರಣೆಗಳ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆ   ವಹಿಸಿದ್ದ ಜಾಗೃತಿ
ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ಅಧ್ಯಕ್ಷೆ  ಪ್ರೊ.ಮಿತ್ರಪ್ರಭಾ ಹೆಗ್ಡೆಯವರು ಮಾತನಾಡಿ ,ಇಂದಿನ ಬದುಕಿನಲ್ಲಿ ಸಾಹಿತ್ಯ ರಚನೆಗಳಿಗೆ ಬಹಳಷ್ಟು ವೇದಿಕೆಗಳ ಮೂಲಕ ಪ್ರೋತ್ಸಾಹ ದೊರೆಯುತ್ತಿದೆ.  ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳು ಸದಸ್ಯೆಯರಿಂದ ಬಿಡುಗಡೆ ಆಗಲಿ ಎಂದು ಶುಭ ಹಾರೈಸಿದರು.
  ,
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸದಸ್ಯೆ  ಶ್ರೀಮತಿ ಸುಲೋಚನ ಬಿ .ವಿ.ಯವರು ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮಕ್ಕೆ ಶ್ರೀಮತಿ  ರೂಪಾ ಚಿಪ್ಲೂಂಣಕರ್
ರವರು ಪ್ರಾರ್ಥಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page