30 C
Udupi
Monday, February 23, 2026
spot_img
spot_img
HomeBlogಬಾಲ ಸಂಸ್ಕಾರ ಮಕ್ಕಳಿಂದ ರಾಮಕೃಷ್ಣಾಶ್ರಮಕ್ಕೆ ಭೇಟಿ

ಬಾಲ ಸಂಸ್ಕಾರ ಮಕ್ಕಳಿಂದ ರಾಮಕೃಷ್ಣಾಶ್ರಮಕ್ಕೆ ಭೇಟಿ

ಆಶ್ರಮಗಳು ಬೇಕು ವೃದ್ಧಾಶ್ರಮಗಳಲ್ಲ:ಗಣೇಶ್ ಜಾಲ್ಸೂರು

ಬೈಲೂರು : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಬೈಲೂರಿನ ಶ್ರೀ ರಾಮಕೃಷ್ಣಾಶ್ರಮಕ್ಕೆ ಮಕ್ಕಳು ಭೇಟಿ ನೀಡಿದರು. ಆಶ್ರಮದ ಪೂಜ್ಯ ಯತಿ ಸ್ವಾಮಿ ವಿನಾಯಕಾನಂದ ಮಹಾರಾಜ್‌ರವರು ಆಶೀರ್ವಚನ ನೀಡಿ, ವ್ಯಕ್ತಿಯ ಸಮಗ್ರ ಬೇಳವಣಿಗೆಯಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಹಾಗೂ ಆದ್ಯಾತ್ಮಿಕ ಅಂಶಗಳು ಮುಖ್ಯ. ಈ ನಿಟ್ಟಿನಲ್ಲಿ ಜ್ಞಾನಭಾರತ್ ತಂಡವು ಮಕ್ಕಳ ಶ್ರೇಯೋಭಿವೃದ್ದಿಗಾಗಿ ಇಂತಹ ಕಾರ್ಯವನ್ನು ಕೈಗೊಂಡಿರುವುದು ಪ್ರಶಂಸನೀಯ ಎಂದರು


ಬಾಲ ಸಂಸ್ಕಾರ ವಿಹಾರದಲ್ಲಿ ಉಪಸ್ಥಿತರಿದ್ದ ಸಾಹಿತಿ ಗಣೇಶ್ ಜಾಲ್ಸೂರು ಮಾತನಾಡಿ, ಇಂತಹ ಆಶ್ರಮಗಳು ಬೇಕು, ವೃದ್ಧಾಶ್ರಮಗಳಲ್ಲ. ಯಾಕೆಂದರೆ ನಾವೇ ನಮ್ಮ ಪ್ರೀತಿಯಿಂದ
ಮನೆಯ ಹಿರಿಯರನ್ನು ಗೌರವಿಸಬೇಕು. ಸಂಸಾರದಲ್ಲಿ ಸಂಸ್ಕಾರವಿದ್ದರೆ ಬಹಳ ಸುಂದರವಾದ ಜೀವನವನ್ನು ಸಾಗಿಸಬಹುದು. ಹಣದ ಹಿಂದಿರುವ ಮಾನವ ಇತಿಮಿತಿಯನ್ನರಿಯದೆ ಹೆಣವಾಗುತ್ತಿದ್ದಾನೆ. ಜ್ಞಾನಭಾರತ್-ಬಾಲಸಂಸ್ಕಾರ ವೃಂದದ ಮುಖೇನ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಸುಧಾಕಾರ್
ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು. ಮಕ್ಕಳು ಆಶ್ರಮದ ಪ್ರಶಾಂತ ವಾತವರಣದಲ್ಲಿ ವಿಹರಿಸಿ
ಅಲ್ಲಿರುವ ಸ್ವರ್ಣಾನದಿ ತೀರ, ದೇಶದ ವಿವಿಧ ಮೂಲೆಗಳಿಂದ ತಂದು ಪೂಜಿಸಲ್ಪಡುತ್ತಿರುವ ದ್ವಾದಶ ಲಿಂಗಗಳನ್ನು, ದಿವ್ಯತ್ರಯರ ಪ್ರಾರ್ಥನಾಲಯವನ್ನು, ಶಾರದಾ ಮಂಟಪ ಹಾಗೂ
ಸ್ವಾಮಿ ವಿವೇಕಾನಂದ ಮಂಟಪದ ದರ್ಶನ ಪಡೆದರು. ಈ ಸಂದರ್ಭ ಆಶ್ರಮದ ಪೂಜ್ಯ ಯತಿ ಸ್ವಾಮಿ ವಿನಾಯಕಾನಂದ ಮಹಾರಾಜ್‌ರವರನ್ನು ವೃಂದದ ವತಿಯಿಂದ ಗೌರವಿಸಲಾಯಿತು. ಹಿರಿಯ-ಕಿರಿಯ ಬ್ರಹ್ಮಚಾರಿಗಳು, ಸ್ವಯಂ ಸೇವಕರು ಸಹಕರಿಸಿದರು. ವೃಂದದ ಕಾರ್ಯದರ್ಶಿ ಸಂಗೀತಾ
ಕುಲಾಲ್, ಸದಸ್ಯರಾದ ದೀಪಕ್ ಕೆ.ಎಸ್, ಗಾಯತ್ರಿ ನಾಗೇಶ್, ಚೇತನಾ ಸಂದೀಪ್, ರಶ್ಮಿ ಭಟ್, ಸಂತೋಷ್ ನೆಲ್ಲಿಕಾರು ಹಾಗೂ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page