ಆಸರೆ ಮನೆಯ ಅಸ್ತಾಂತರ ಮತ್ತು ಉದ್ಘಾಟನಾ ಕಾರ್ಯಕ್ರಮ
ಉದ್ಘಾಟಕರಾಗಿ ಶಾಸಕ ವಿ. ಸುನಿಲ್ ಕುಮಾರ್

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ)ಕರ್ನಾಟಕ ಇದರ 81ನೇ ಸೇವಾ ಯೋಜನೆ
ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ವತಿಯಿಂದ
ರಾಜೀವ್ ನಗರ ಹಿರ್ಗಾನ ದಿನೇಶ್ ರವರು 12 ವರ್ಷದ ಹಿಂದೆ ನಿರ್ಮಾಣ ಮಾಡಿರುವ ಮನೆಗೆ ಮೂಲಭೂತ ಸೌಕರ್ಯವಿಲ್ಲದೆ ಬಹಳ ಆರ್ಥಿಕವಾಗಿ ನೊಂದಿರುವ ಕುಟುಂಬಕ್ಕೆ ಆಸರೆಯಾಗಿ ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ತಂಡ ಕೈ ಜೋಡಿಸಿ ಮನೆಯ ಸಂಪೂರ್ಣ ಕೆಲಸವನ್ನು ಮಾಡಿಕೊಟ್ಟಿರುತ್ತದೆ,
ದಿನೇಶ್ ರವರ ಧರ್ಮಪತ್ನಿ ಯವರ ಆರೋಗ್ಯ ಬಹಳ ಚಿಂತಾಜನಕವಾಗಿರುವುದರಿಂದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿರುತ್ತೇವೆ,

ಆಸರೆಯ ಮನೆ ಹಸ್ತಾಂತರ
ನಾಳೆ ಸಂಜೆ 5:30ಕ್ಕೆ
ಸ್ಥಳ ರಾಜೀವ್ ನಗರ ಹಿರ್ಗಾನ ಮುಜೂರಿನಲ್ಲಿ
ಉದ್ಘಾಟನೆ ಮತ್ತು ಆಸರೆಯ ಮನೆಯ ಹಸ್ತಾಂತರ ವನ್ನು ವಿ.ಸುನಿಲ್ ಕುಮಾರ್ ( ಶಾಸಕರು ಕಾರ್ಕಳ) ನೆರವೇರಿಸಲಿದ್ದಾರೆ ಎಂದು ತಂಡ ಪ್ರಕಟಣೆಯಲ್ಲಿ ತಿಳಿಸಿದೆ.
