ಕಾರ್ಕಳ: ಡಿ. 12 ಸಂಜೆ 6.30 ರ ವೇಳೆಗೆ ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಚಿಕ್ಕಾಲ್ ಬೆಟ್ಟು ಸಮೀಪ ಬೈಕ್ ಮತ್ತು ಮಹೀಂದ್ರಾ ಪಿಕ್ ವಾಹನ ನಡುವೆ ಅಪಘಾತ ಸಂಭವಿಸಿದ್ದು , ಘಟನೆಯಲ್ಲಿ ಬೈಕ್ ಸವಾರ ಸಾವಿಗೀಡಾಗಿದ್ದಾನೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಹಿರ್ಗಾನದ ಲಾರೆನ್ಸ್ ಅಲ್ಮೆಡಾ (50) ಎಂದು ಗುರುತಿಸಲಾಗಿದೆ. ಪ್ರಕರಣ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದೆ.