
ಉಡುಪಿ: ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ, ಮಂಗಳವಾರ ನಸುಕಿನ ಜಾವ ನಕ್ಸಲ್ ನಿಗ್ರಹದಳ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಕಾರ್ಯಕರ್ತ ವಿಕ್ರಂ ಗೌಡ ನನ್ನು ಎನ್ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸೋಮವಾರ ರಾತ್ರಿ ನಕ್ಸಲರ ತಂಡ ದಿನಸಿ ಸಾಮಗ್ರಿಗೆಂದು ಬಂದ ಸಮಯದಲ್ಲಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಓರ್ವ ಮೃತಪಟ್ಟಿದ್ದು ಉಳಿದವರು ಪರಾರಿಯಾಗಿದ್ದಾರೆ. ಎನ್ಕೌಂಟರ್ ಬಗ್ಗೆ ಎಎನ್ಎಫ್ ಅಧಿಕೃತ ಮಾಹಿತಿ ನೀಡಿಲ್ಲ.



















