ಜೇಸಿಸ್ ವಿದ್ಯಾ ಸಂಸ್ಥೆಯ ಶಿಕ್ಷಕಿ ವಂದನಾ ರೈ ಮಕ್ಕಳ ದಿನಾಚರಣೆ ಯ ವಿಡಿಯೋ…

ಫೇಸ್ ಬುಕ್ ನಲ್ಲಿ ಒಂದೇ ದಿವಸದಲ್ಲಿ 60 ಲಕ್ಷಕ್ಕೂ ಮಿಗಿಲಾಗಿ ವೀಕ್ಷಣೆಗೊಂಡ ವಂದನಾ ರೈ ಇವರ ಮಕ್ಕಳ ದಿನಾಚರಣೆಯ ವೀಡಿಯೋ. ಅವರ ಇಷ್ಟು ವಿಡಿಯೋಗಳ ನಡುವೆ ಈ ವಿಡಿಯೋ ಮೊದಲಾಗಿ ಹೆಚ್ಚು ವೀಕ್ಷಣೆಯನ್ನು ಗಳಿಸಿದೆ.
ಸೋಶಿಯಲ್ ಮೀಡಿಯಾ ದಲ್ಲಿ ಸಖತ್ ಆಕ್ಟಿವ್ ಆಗಿರುವ ವಂದನಾ ರೈ ಅವರು ಕಾರ್ಕಳ ದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ. ಮಕ್ಕಳ ದಿನಾಚರಣೆಯ ದಿನ ಶಿಕ್ಷಕರೆಲ್ಲರೂ ಸೇರಿ ವಿನೂತನವಾಗಿ ನೃತ್ಯ ಮಾಡಿ ಮಕ್ಕಳ ಜೊತೆ ಮಕ್ಕಳಾಗಿ ಕಾರ್ಯಕ್ರಮವನ್ನು ನಡೆಸಿದ್ದರು. ಅದನ್ನು ಅವರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.



















