ಮಾನವೀಯತೆ ಮೆರೆದ ಮಿಯ್ಯಾರು ಗ್ರಾಮ ಪಂಚಾಯತ್ ನ ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿಗಳು

ಮಿಯ್ಯಾರು ಗ್ರಾಮದ ನಿವಾಸಿ ಗ್ರಾಮ ಒನ್ ನಿರ್ವಾಹಕ ಗಣೇಶ ಶೆಣೈ ಇವರ ತಾಯಿ ನಾಗರತ್ನ ಎ ಶೆಣೈ ಇವರ ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ರೂ .4000 ನಗದು ಮತ್ತು ಓಟರ್ ಐಡಿ ಹಾಗೂ ಶಾಲೆಯ ದೃಡೀಕರಣ ಪ್ರತಿ ಇದ್ದ ಚಿಕ್ಕ ಪರ್ಸ್ ಕಳೆದು ಹೋಗಿತ್ತು. ಮಿಯ್ಯಾರು ಗ್ರಾಮ ಪಂಚಾಯತ್ತಿನ ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿಗಳಾದ ಶ್ರೀಮತಿ ಲಲಿತಾ, ಶ್ರೀಮತಿ ಸುನಿತಾ ಮತ್ತು ಕೃಷ್ಣ ಇವರಿಗೆ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ವಿಂಗಡಿಸುವ ಸಂದರ್ಭದಲ್ಲಿ ದೊರೆತಿದ್ದು, ಅವರು ಮಿಯ್ಯಾರು ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿರುತ್ತಾರೆ.
ಈ ಬಗ್ಗೆ ಗ್ರಾಮಪಂಚಾಯತ್ ನಿಂದ ಗಣೇಶ್ ಶೆಣೈಯವರನ್ನು ಸಂಪರ್ಕಿಸಿ ಚಿನ್ನದ ಸರ ಹಾಗೂ ನಗದು ಇರುವ ಪರ್ಸನ್ನು ಮಿಯ್ಯಾರು ಗ್ರಾಮಪಂಚಾಯತ್ ನ ಕಾರ್ಯದರ್ಶಿಯವರು ಹಸ್ತಾಂತರಿಸಿದರು. ಮಿಯ್ಯಾರು ಗ್ರಾಮಪಂಚಾಯತ್ ಸಂಗ್ರಹಣಾ ಸಿಬ್ಬಂದಿಗಳ ಈ ಕಾರ್ಯವನ್ನು ಮೆಚ್ಚಿ ಗಣೇಶ ಶೆಣೈ ಅವರ ಮನೆಯವರು ಕೃತಜ್ಞತಾ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



















