ಯೆನೆಪೋಯ ಫಿಜಿಯೋಥೆರಪಿ ಸ್ನಾತಕೋತರ ವಿದ್ಯಾರ್ಥಿಗಳ ವತಿಯಿಂದ ದೇಣಿಗೆ ಹಸ್ತಾಂತರ

ಯೆನೆಪೋಯ ಫಿಸಿಯೋಥೆರಪಿ ಡೆಪಾರ್ಟ್ಮೆಂಟ್ ಸ್ನಾತಕೋತ್ತರ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಪ್ರಯುಕ್ತ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಗಾಗಿ ದೇಣಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರೊಫೆಸರ್ ಜಯ ಗಣೇಶ್, ವಿಜೇತ ವಿಶೇಷ ಶಾಲಾ ಫಿಸಿಯೋಥೆರಪಿಸ್ಟ್ ಡಾ. ವೆನ್ಸಿಟಾ ಪ್ರಿಯಾಂಕ ಅರಾನ್ಹ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೇಕ್ ಕತ್ತರಿಸುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಿ ಶಾಲಾ ವಿದ್ಯಾರ್ಥಿ ಗಳಾದ ಮಾ. ಆರಿಫ್ ಹಾಗೂ ಕು. ಹರ್ಷಿತಾ ಇವರನ್ನು ಗೌರವಿಸಲಾಯಿತು .
2.ಬಾಲಾಜಿ ಕ್ಯಾಟ್ರಿಂಗ್ ಮಾಲಕರಾದ ಶ್ರೀ ಆದಿತ್ಯ ಶೆಣೈ ಹಾಗೂ ಅವರ ಮಾತೃಶ್ರೀ ಪೂರ್ಣಿಮಾ ಶೆಣೈ ಇವರು ಮಕ್ಕಳ ದಿನಾಚರಣೆ ಪ್ರಯುಕ್ತ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು.
3. ಧನಂಜಯ್ & ಶ್ರೀಮತಿ ಆಶಾ ದಂಪತಿಗಳ ಸುಪುತ್ರಿ ಕು.ಪ್ರಾಪ್ತಿ ಇವರು ಹಾಗೂ ಅವರ ಸಹೋದರ ಆದರ್ಶ್ ಇವರು ಮಕ್ಕಳಿಗೆ ಸಿಹಿತಿಂಡಿ ಹಸ್ತಾಂತರಿಸಿದರು.
- ಎನ್ ಎಂ ಎ ಎಂ ಐ ನಿಟ್ಟೆ ಟೀಮ್ ಅನ್ನದಾನ ಕ್ಲಬ್ & ಎನ್ ಎಸ್ ಎಸ್ ತಂಡದ ಸ್ವಯಂ ಸೇವಕರು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಮಕ್ಕಳ ದಿನಾಚರಣೆ ಪ್ರಯುಕ್ತ ದಿನಸಿ ವಸ್ತುಗಳನ್ನು ಹಾಗೂ ಹಣ್ಣು ಹಂಪಲುಗಳನ್ನು ಹಸ್ತಾಂತರಿಸಿದರು.
- ವಿವೇಕ್ ಕಿಣಿ & ಶ್ರೀಮತಿ ಮಂಜುಶ್ರೀ ಕಿಣಿ ದಂಪತಿಗಳ ಸುಪುತ್ರಿ ಬೇಬಿ.ಅನನ್ಯ ಕಿಣಿ ಇವರ ಪ್ರಯುಕ್ತ ವಿಜೇತ ವಿಶೇಷ ಶಾಲಾ ಮಕ್ಕಳ ವಿಶೇಷ ಭೋಜನದ ವ್ಯವಸ್ಥೆಗೆ ದೇಣಿಗೆ ನೀಡಿ ಸಹಕರಿಸಿದರು.





















