ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸುವುದರೊಂದಿಗೆ ಮಕ್ಕಳ ದಿನ ಆಚರಣೆ

ಕಾರ್ಕಳ: ನ.14 ರಂದು ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸುವುದರೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಶಾಲಾ ಹಿತೈಷಿ, ಹಾಗೂ ಕೊಡುಗೈದಾನಿಗಳಾದ ಕಮಲಾಕ್ಷ ಕಾಮತ್ ರವರು ಆಗಮಿಸಿ ಮಕ್ಕಳ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಎಲ್ಲರಿಗೂ ಸಿಹಿತಿಂಡಿಯನ್ನು ವಿತರಿಸಿದರು. ಸ್ಪರ್ಧಾ ವಿಜೇತರಿಗೆ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆ ಯವರು ಬಹುಮಾನದ ವ್ಯವಸ್ಥೆ ಮಾಡಿದ್ದು ಕಮಲಾಕ್ಷ ಕಾಮತ್ ರವರು ವಿಜೇತರಿಗೆ ನೀಡಿ ಗೌರವಿಸಿದರು. ಸಹ ಶಿಕ್ಷಕ ಸುದರ್ಶನ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಸ್ಪರ್ಧೆಗಳು ನಡೆಯಿತು. ಎಲ್ಲಾ ವಿದ್ಯಾರ್ಥಿಗಳು ಸಂಭ್ರಮಿಸಿದರು.




















