
ಬೆಂಗಳೂರು: ರೈಲ್ವೆ ಇಲಾಖೆಯ ರಾಜ್ಯದಿಂದ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು ವ್ಯವಸ್ಥೆ ಮಾಡಿದ್ದು ಮೂರು ತಿಂಗಳಗಳ ಕಾಲ ಶಬರಿಮಲ ಭಕ್ತರಿಗಾಗಿ ವಿಶೇಷ ರೈಲು ಸಂಚರಿಸಲಿದೆ.
ಶಬರಿಮಲೆ ಋತುವಿನಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸುವ ಉದ್ದೇಶದಿಂದ ಕೊಚುವೇಲಿ- ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ದಕ್ಷಿಣ ರೈಲ್ವೆ ವಿಶೇಷ ರೈಲುಗಳ ಸೇವೆಯನ್ನು ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ರೈಲು ಸಂಖ್ಯೆ 06083 ಕೊಚುವೇಲಿ ಎಸ್ಎಂ ವಿಟಿ ಬೆಂಗಳೂರು ಸಪ್ತಾಹಿಕ ಎಕ್ಸ್ಪ್ರೆಸ್ ವಿಶ್ವೇಶ್ವರಯ್ಯ ಕೊಚುವೇಲಿ ನಿಲ್ದಾಣದಿಂದ ನವೆಂಬರ್ 12ರಿಂದ ಜನವರಿ 28 ರವರಿಗೆ ಪ್ರತಿ ಮಂಗಳವಾರ ಸಂಜೆ 06:05 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 10:55 ಕ್ಕೆ ಎಸ್ಎಂಐಟಿ ಬೆಂಗಳೂರು ತಲುಪಲಿದೆ.
ರೈಲು ಸಂಖ್ಯೆ 06084 ಎಸ್ಎಂವಿಟಿ ಬೆಂಗಳೂರು ಕೊಚುವೇಲಿ ಸಪ್ತಾಹಿಕ ಎಕ್ಸ್ಪ್ರೆಸ್ ವಿಶ್ವೇಶ್ವರಯ್ಯ ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ನವೆಂಬರ್ 13 ರಿಂದ 2025 ಜನವರಿ 29 ರವರೆಗೆ ಪ್ರತಿ ಬುಧವಾರ ಮಧ್ಯಾನ 12:45 ಕ್ಕೆ ಹೊರಟು ಮರುದಿನ ಬೆಳಗ್ಗೆ 6:45ಕ್ಕೆ ಕೊಚುವೇಲಿ ತಲುಪಲಿದೆ.
ಹೆಚ್ಚಿನ ಮಾಹಿತಿಗಾಗಿ www.enquiry.indianrail.govt.in ಅಧಿಕೃತ ರೈಲ್ವೆ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ರೈಲುಗಳ ಸಮಯವನ್ನು ಪರಿಶೀಲನೆ ಮಾಡಬಹುದಾಗಿದೆ.



















