
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಕರ್ನಾಟಕ ಸರಕಾರ, ಪದವಿಪೂರ್ವ ಉಪನಿರ್ದೇಶಕರ ಕಛೇರಿ, ಉತ್ತರ ಕನ್ನಡ,ಕಾರವಾರ ಹಾಗೂ ಶ್ರೀ ಮಾರಿಕಾಂಬ ಸರಕಾರಿ ಪದವಿ ಪೂರ್ವ ಕಾಲೇಜು ಶಿರಸಿ ಇವರ ಜಂಟಿ ಆಶ್ರಯದಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿಜಯಿಯಾದ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಶಾನ್ವಿ ಬಲ್ಲಾಳ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈ ಮೂಲಕ ಸತತ ಐದನೇ ಬಾರಿ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾದAತಹ ಅಮೋಘ ಸಾಧನೆಯನ್ನು ಶಾನ್ವಿ ಬಲ್ಲಾಳ್ ತನ್ನದಾಗಿಸಿಕೊಂಡಿದ್ದಾಳೆ. ಮುಂದೆ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ಶಾನ್ವಿ ಬಲ್ಲಾಳ್ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ.






















































