
ಅಜೆಕಾರು : ಶಿರ್ಲಾಲು ಎಸ್. ರಾಜು ಶೆಟ್ಟಿ (75) ಅವರು ಅ. 26 ರಂದು ಶಿರ್ಲಾಳಿನ ಸ್ವಗ್ರಹ ದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು. ಇವರು 35 ವರ್ಷಗಳ ಕಾಲ ಅಂಚೆ ಇಲಾಖೆ ಯಲ್ಲಿ ಸೇವೆ ಸಲ್ಲಿಸಿ ನಿವೃತ ಜೀವನ ನಡೆಸುತ್ತಿದ್ದರು.
ಮೃತರು ಪತ್ನಿ ಓರ್ವ ಪುತ್ರಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಮೃತರು ಮುಂಚೆ ಶಿರ್ಲಾಳಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯ ಕಾರ್ಯದರ್ಶಿಯಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದರು. ಮತ್ತು 5 ವರ್ಷಗಳ ಕಾಲ ಶಿರ್ಲಾಲ್ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಕೂಡ ಆಗಿದ್ದರು. ಮತ್ತು ಅನೇಕ ವರ್ಷಗಳ ಕಾಲ ಹಾಲು ಉತ್ಪಾಕರ ಸಹಾಕರಿ ಸಂಘದ ಕಾರ್ಯದರ್ಶಿ ಆಗಿದ್ದರು.ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.







