ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಭಜನಾ ಒಕ್ಕೂಟದ ವತಿಯಿಂದ ಮನವಿ

ಕುಣಿತ ಭಜನೆಯ ಬಗ್ಗೆ ಮತ್ತು ಭಜನೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರ ಬಗ್ಗೆ ಇತ್ತೀಚಿನ ಕೆಲವು ದಿನಗಳಿಂದ ರಾಜಕೀಯ ಪ್ರೇರಿತ ಕೆಲವೊಂದು ವ್ಯಕ್ತಿಗಳು ಹಾಗೂ ಬೆರಳೆಣಿಕೆಯ ಸರಕಾರಿ ನೌಕರರು ಕೆಲವೊಂದು ಅಪ್ರಬುದ್ಧ ಹೇಳಿಕೆಗಳನ್ನು ನೀಡುತ್ತಿದ್ದು ಮತ್ತು ಅತ್ಯಂತ ಕೀಳು ಮಟ್ಟದಲ್ಲಿ ಪದಬಳಕೆ ಮಾಡಿ ಹೇಳಿಕೆ ನೀಡಿರುತ್ತಾರೆ.
ಸದ್ರಿ ಹೇಳಿಕೆಗಳಿಂದಾಗಿ ಹೆಣ್ಣು ಮಕ್ಕಳಿಗೆ ಹಾಗೂ ಎಲ್ಲಾ ಭಜಕಾರಿಗೂ ಅತ್ಯಂತ ಬೇಸರದ ವಿಚಾರವಾಗಿದ್ದು, ಹಿಂದೂ ಧಾರ್ಮಿಕತೆಗೂ ದಕ್ಕೆಯಾಗಿರುವುದಲ್ಲದೆ ಭಜನಾ ತಂಡಗಳನ್ನು ಜನ ಸಾಮಾನ್ಯರು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.ಈ ರೀತಿಯ ಹಿಂದೂ ವಿರೋಧಿ ಹಾಗೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡುವ ಹೇಳಿಕೆಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯವರು ನೀಡದಂತೆ ಹಾಗೂ ಈ ರೀತಿಯ ಹೇಳಿಕೆಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಸಮರ್ಥನೆ ಮಾಡುವುದನ್ನು ನಿರ್ಬಂಧಿಸಿ ಸೂಕ್ತ ಕಾನೂನು ಕ್ರಮ ವಹಿಸುವಂತೆ ಆಗ್ರಹಿಸಿ ಮಂಜುನಾಥೇಶ್ವರ ಭಜನಾ ಪರಿಷತ್, ಭಜನಾ ಮಂಡಳಿಗಳ ಒಕ್ಕೂಟ ಮತ್ತು ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ಕಾರ್ಕಳ ತಾಲೂಕು ಘಟಕಗಳು ಜಂಟಿಯಾಗಿ ಕಾರ್ಕಳ ತಹಸಿಲ್ದಾರ್ ಡಾ. ಪ್ರತಿಭಾ ಆರ್ ಹಾಗೂ ಕಾರ್ಕಳ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ಪರಿಷತ್ ಅಧ್ಯಕ್ಷರು ಹರೀಶ್ ಹೆಗ್ಡೆ ಕಡ್ತಲ, ಕಾರ್ಯದರ್ಶಿ ಸುಕೇಶ್ ಸಾಣೂರು, ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರು ಶೈಲೇಶ್ ಸಾಣೂರು, ಕಾರ್ಯದರ್ಶಿ ಅಶೋಕ್ ಶೆಟ್ಟಿ ಅಜೆಕಾರು, ಸ್ಥಾಪಕಾಧ್ಯಕ್ಷರು ಶ್ರೀಕಾಂತ್ ಪ್ರಭು ಪಳ್ಳಿ, ಕರಾವಳಿ ಸಂಸ್ಕಾರ ವೇದಿಕೆಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಎರ್ಲಪಾಡಿ, ಕಾರ್ಕಳ ತಾಲೂಕು ಅಧ್ಯಕ್ಷರು ಗುರಪ್ರಸಾದ್ ಕಡಾರಿ, ಕಾರ್ಯದರ್ಶಿ ಪ್ರಣೀತ್ ಕುಂಟಾಡಿ, ಪದಾಧಿಕಾರಿಗಳಾದ ಜನಾರ್ಧನ್ ಮುನಿಯಾಲು, ಸಚಿತ್, ತಾರಾನಾಥ್ ಹಾಗೂ ಮಹಿಳಾ ಪದಾಧಿಕಾರಿಗಳಾದ ಶಶಿಕಲಾ ಮನಿಯಣಿ, ಸುಮಾ ಕೇಶವ್, ಭಾರತಿ ಅಮೀನ್, ಶೋಭಾ, ಸುಮಾ ಜಯಕರ್, ವಿನಯ ಬಂಗೇರ, ಹಾಗೂ ತಾಲೂಕಿನ ಮತ್ತು ವಲಯದಎಲ್ಲಾ ಪದಾಧಿಕಾರಿಗಳು ಮತ್ತು ನೂರಾರು ಭಜಕರ ಉಪಸ್ಥಿತರಿದ್ದರು.





















































