
ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಮಠದಕೆರೆಯ ನಿವಾಸಿಯಾದ ಗಣೇಶ್ ಪೂಜಾರಿ (47) ವರ್ಷದ ಯುವಕ ತಾರೀಕು 12.10.2024 ಶನಿವಾರ ತೆಂಗಿನ ಮರದಿಂದ ಬಿದ್ದು ಸೊಂಟದ ಕೀಳು ಮುರಿದು ಈಗ ಕಾರ್ಕಳದ ಖಾಸಗಿ ಆಸ್ಪತ್ರೆಯಾದ ಸಿಟಿ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈತ ಮುಂಬಯಿ ಹೋಟೆಲ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಅಸೌಖ್ಯದ ಕಾರಣ ಮುಂಬಾಯಿಂದ ಊರಿಗೆ ಬಂದು ಚಿಕಿತ್ಸೆ ಪಡೆದು ನಂತರ ಮುಂಬಾಯಿಗೆ ಹೋಗಲು ಅನಾನುಕೂಲ ಆದ ಕಾರಣ ಊರಿನಲ್ಲೇ ಉಳಿದುಕೊಳ್ಳುತ್ತಾರೆ ಇವರು ಅವಿವಾಹಿತರಾಗಿದ್ದು ತೀರಾ ಕಡುಬಡವರಾಗಿರುತ್ತಾರೆ ಇವರ ಆಸ್ಪತ್ರೆಯ ಖರ್ಚು ಸುಮಾರು 3ಲಕ್ಷ ಆಗಿರುವುದು ಎಂದು ವೈದ್ಯರು ತಿಳಿಸಿರುತ್ತಾರೆ. ಈ ಮೊತ್ತವನ್ನು ಅವರಿಂದ ಭರಿಸಲಾಗದೆ ಅವರು ತಮ್ಮಲ್ಲಿ ಧನ ಸಹಾಯ ಮಾಡಲು ಈ ಮೂಲಕ ವಿನಂತಿಸಿರುತ್ತಾರೆ













