
ಕಾರ್ಕಳ: ಶಿಕ್ಷಕಿ,ಸಾಹಿತಿ ಪ್ರಜ್ವಲಾ ಶೆಣೈ ಅವರಿಗೆ ಬೆಂಗಳೂರಿನ ಸ್ಪಾರ್ಕ್ ಅಕಾಡೆಮಿ, ಸೂರ್ಯ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಮೈಸೂರು ವತಿಯಿಂದ ಚಿಕ್ಕ ಬಾಣಾವರ ಸಮೀಪದ ಇಂಡೋ ಗ್ಲೋಬ್ ಕಾಲೇಜಿನಲ್ಲಿ ದಿನಾಂಕ 15/10/2024 ರಂದು ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ 2024-25 ನೇ ಸಾಲಿನ ಶಿಕ್ಷಣ ಸಿಂಧುರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವಿವಿಧ ಜಿಲ್ಲೆಗಳ 19 ಮಂದಿ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಉತ್ತಮ ಸಾಧಕರಾಗಿ,ವಿಶಿಷ್ಟ ಶಿಕ್ಷಕರಾಗಿ ಗುರುತಿಸಿ ಕೊಂಡಿರುವ ಶ್ರೀಮತಿ ಪ್ರಜ್ವಲಾ ಶೆಣೈ ಅವರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು,ಸ್ಪಾರ್ಕ್ ಅಕಾಡೆಮಿ ಹಾಗೂ ಸೂರ್ಯ ಫೌಂಡೇಶನ್ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.













