ಪ್ರಸಿದ್ಧ ಗಾಯಕಿ ಸಾಧ್ವಿನಿ ಕೊಪ್ಪ ಇವರಿಂದ “ಭಕ್ತಿಗಾನ ಕಾರ್ಯಕ್ರಮ”

ಶ್ರೀ ಮಹಾಮ್ಮಾಯಿ ದೇವಸ್ಥಾನ – ರೆಂಜಾಳ,ಸಂಸ್ಕೃತಿ ಸಿಂಚನ – ರೆಂಜಾಳ ಸಹಯೋಗದಲ್ಲಿ ಅಕ್ಟೋಬರ್ 17 ಗುರುವಾರ ಸಂಜೆ 7.30 ಕ್ಕೆ ಶ್ರೀ ಮಹಾಮ್ಮಾಯಿ ದೇವಸ್ಥಾನ ರೆಂಜಾಳದಲ್ಲಿ ಕರ್ನಾಟಕದ ಪ್ರಸಿದ್ಧ ಗಾಯಕಿ ಸಾಧ್ವಿನಿ ಕೊಪ್ಪ ಇವರಿಂದ “ಭಕ್ತಿಗಾನ” ಕಾರ್ಯಕ್ರಮ ನಡೆಯಲಿದೆ.
ನಾಡಹಬ್ಬ ನವರಾತ್ರಿ ಉತ್ಸವದ ಪರ್ವಕಾಲದಲ್ಲಿ ಪ್ರತಿ ವರ್ಷದಂತೆ ಅಕ್ಟೋಬರ್ 17,ಗುರುವಾರದಂದು
ದೇವಸ್ಥಾನದಲ್ಲಿ ಚಂಡಿಕಾ ಹೋಮ ಜರಗಲಿರುವುದು.ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರಾತ್ರಿ ಗಂಟೆ 7.30ರಿಂದ ಭಕ್ತಿಗಾನ ಸುಧೆ ಕಾರ್ಯಕ್ರಮ ಜರಗಲಿರುವುದು.
ಭಕ್ತಿಗಾನ ಸುಧೆ ಕಾರ್ಯಕ್ರಮದ ನಂತರ ಮಹಾಪೂಜೆ ಹಾಗೂ ಉಪಾಹಾರ ನಡೆಯಲಿರುವುದು.































































































































