32.8 C
Udupi
Sunday, April 26, 2026
spot_img
spot_img
HomeBlogನಾಡಹಬ್ಬ ದಸರ ಸಂಭ್ರಮದ ನಡುವೆ ಗಂಡು ಮಗುವಿಗೆ ಜನ್ಮ ನೀಡಿದ ತ್ರಿಶಿಕಾ ಕುಮಾರಿ ಒಡೆಯರ್‌

ನಾಡಹಬ್ಬ ದಸರ ಸಂಭ್ರಮದ ನಡುವೆ ಗಂಡು ಮಗುವಿಗೆ ಜನ್ಮ ನೀಡಿದ ತ್ರಿಶಿಕಾ ಕುಮಾರಿ ಒಡೆಯರ್‌

ಮೈಸೂರು: ನವರಾತ್ರಿಯ ಸಂಭ್ರಮದ ನಡುವೆಯೇ, ಯುವರಾಣಿ ತ್ರಿಶಿಕಾ ಕುಮಾರಿ ಒಡೆಯರ್‌ ಅವರು ಇನ್ನೊಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮೈಸೂರು ಅರಮನೆಗೂ ಮೈಸೂರಿನ ಜನತೆಗೂ ದಸರಾ ಹಬ್ಬದ ಸಂಭ್ರಮ ಇದರಿಂದ ದುಪ್ಪಟ್ಟಾಗಿದೆ.

ಹಬ್ಬದ ನಡುವೆಯೇ, ಅದೂ ಆಯುಧ ಪೂಜೆಯ ದಿನವೇ ಪುತ್ರೋತ್ಸವ ಆಗಿರುವುದು ಇದೀಗ ಅರಮನೆಯ ಸಂತಸವನ್ನು ದುಪ್ಪಟ್ಟುಗೊಳಿಸಿದೆ.

2017ರಲ್ಲಿ ಯದುವೀರ್-‌ ತ್ರಿಶಿಕಾ ಜೋಡಿಗೆ ಚೊಚ್ಚಲ ಮಗುವಿನ ಆಗಮನವಾಗಿತ್ತು. ಗಂಡು ಮಗುವಿಗೆ ಆದ್ಯವೀರ್‌ ಎಂದು ಹೆಸರು ಇಟ್ಟಿದ್ದಾರೆ. ಆದ್ಯವೀರ್‌ ಹುಟ್ಟಿದ ಬಳಿಕ ಅರಮನೆ ನೂತನ ಯುವರಾಜನ ನಂದನವನವಾಗಿ ಪರಿವರ್ತನೆಯಾಗಿತ್ತು. ಸಾಮಾನ್ಯವಾಗಿ ಯದುವೀರ್-‌ ತ್ರಿಶಿಕಾ ತಮ್ಮ ಖಾಸಗಿ ವಿಚಾರಗಳನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳಲು ಬಯಸುತ್ತಾರೆ. ಹೀಗಾಗಿ ಎರಡನೇ ಸಲ ಗರ್ಭಿಣಿಯಾಗಿರುವ ವಿಚಾರವನ್ನು ಅವರು ಗುಪ್ತವಾಗಿಯೇ ಇಟ್ಟುಕೊಂಡಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page