
ಹಾವೇರಿ ಜಿಲ್ಲೆಯ ರಾಣೇ ಬೆನ್ನೂರ್ ನಲ್ಲಿ ಕೋಡಿ ಮಠ ಮಹಾ ಸಂಸ್ಥಾನ ಅರಸೀಕೆರೆ ತಾಲೂಕಿನ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿಗಳಿಂದ ಸಮಾಜ ಸೇವೆಗಾಗಿ ಗೌರವ ಸ್ವೀಕರಿಸಲಾಯಿತು
ಸೇವಾ ಅಂದರ ಸಂಸ್ಥೆ ರಿ. ಹಾವೇರಿ. ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ಶಾಲೆ ರಾಣೇ ಬೆನ್ನೂರು ಇಲ್ಲಿ ವಿಶ್ವ ಕಿವುಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಕೋಡಿ ಮಠದ ಶಿವಾನಂದ ರಾಜಯೋಗಿ ಸ್ವಾಮೀಜಿಗಳಿಗೆ ಶಿಕ್ಷಕ/ ಶಿಕ್ಷಕೇತರರ ಗೌರವಧನ ಹೆಚ್ಚಿಸುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮಾತನಾಡುವಂತೆ ವಿನಂತಿಸಿ ಮನವಿ ಸಲ್ಲಿಸಲಾಯಿತು.
ವಸಂತ್ ಕುಮಾರ್ ಶೆಟ್ಟಿ, ಡಾ ಕಾಂತಿ ಹರೀಶ್, ರಮೇಶ್ ಮಡಿವಾಳ ಇವರಿಗೆ ಸ್ವಾಮೀಜಿಯವರು ಅಮೃತ ಹಸ್ತ ದಿಂದ ಗೌರವಿಸಿದರು. ಅದ್ಭುತವಾದ ಕಾರ್ಯಕ್ರಮ ಸಂಯೋಜನೆ ಮಾಡಿದ ಅಂದರ ಸೇವಾ ಸಂಸ್ಥೆಯ ಅಧ್ಯಕ್ಷರು ಶಿವಕುಮಾರ್ ಅವರಿಗೆ ಮುಖ್ಯೋಪಾಧ್ಯಾಯರಾದ ಶಿವರಾಜ್ ಅವರಿಗೆ ಶಿಕ್ಷಕ ಶಿಕ್ಷಕೇತರ ವೃಂದಕ್ಕೆ ಹೃತ್ಪೂರ್ವಕ ಸಲ್ಲಿಸಿದ್ದಾರೆ














