ಕಾರ್ಕಳದ ಸುರೇಂದ್ರ ಶೆಟ್ಟಿ ಆಯ್ಕೆ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಕಾರ್ಕಳ ಮೂಲದ ಕೋಟೇಶ್ವರದ ಸುರೇಂದ್ರ ಶೆಟ್ಟಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ಒಂಬತ್ತು ಮಂದಿ ಸದಸ್ಯತ್ವದ ಈ ತಂಡದಲ್ಲಿ, ಮಹಾಲಿಂಗ ನಾಯ್ಕ ಮೆಟ್ಟಿನಹೊಳೆ ಕಾಲೋಡು, ಧನಾಕ್ಷಿ ವಿಶ್ವನಾಥ್ ಯಡ್ತರೆ ಬೈಂದೂರು, ಸುಧಾ ಕೆ. ಪಡುವರಿ ಬೈಂದೂರ್ , ಕೆ ಬಾಬು ಶೆಟ್ಟಿ ತಗ್ಗರ್ಸೆ ಬೈಂದೂರ್, ಸುರೇಂದ್ರ ಶೆಟ್ಟಿ ಕೋಟೇಶ್ವರ ಕುಂದಾಪುರ, ಅಭಿಲಾಷ್ ಪಿ.ವಿ ಮಂಗಳೂರು, ಯು.ರಾಜೇಶ್ ಕಾರಂತ್, ಉಪ್ಪಿನ ಕುದ್ರು ಕುಂದಾಪುರ, ರಘುರಾಮ್ ದೇವಾಡಿಗ ಆಲೂರು ಕುಂದಾಪುರ ಮುಂತಾದವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ಆಯ್ಕೆಯಾದ ಸದಸ್ಯರಲ್ಲಿ ಓರ್ವರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.













