
ಉಡುಪಿ: ಸೆ. 18 ರಂದು, ಬುಧವಾರ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಕರಾಟೆ ಸ್ಪರ್ಧೆ ಎಸ್.ಎನ್.ವಿ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿ ಉಡುಪಿ ಜಿಲ್ಲಾ ಕರಾಟೆ ಅಸೋಸಿಯೇಶನ್ ಇವರ ಸಹಯೋಗದೊಂದಿಗೆ ನಡೆಯಿತು.
ಕಾರ್ಕಳ ತಾಲೂಕು ಕ್ರೀಡಾ ಕೂಟದ ಮೇಲ್ವಿಚಾರಣೆ ಸಮಿತಿಯ ಅಧ್ಯಕ್ಷರಾದ ಹಾಗು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್ ಇದರ ಪ್ರಾಂಶುಪಾಲರಾದ ವಸಂತ್ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್. ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಕ್ರೀಡಾ ಸಂಯೋಜನಾಧಿಕಾರಿ ಶ್ರಿ ದಿನೇಶ್ ಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ್, ಉಡುಪಿ ಜಿಲ್ಲಾ ಕರಾಟೆ ಸ್ಪರ್ಧೆಯ ವೀಕ್ಷಕರಾದ ನವೀನ್ ಕುಮಾರ್, ತಾಲೂಕ್ ಮೇಲ್ವಿಚಾರಕರಾದ ರವೀಂದ್ರ ಕುಮಾರ್, ಶರತ್ ರಾವ್, ಉಡುಪಿ ಜಿಲ್ಲಾ ಕರಾಟೆ ಅಸೋಶಿಯನ್ ಪದಾಧಿಕಾರಿಗಳು ಹಾಗೂ ಎಸ್ ಎನ್ ವಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ ಪಡಿವಾಳ್ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶರ್ಮಿಳಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಸುಮಾರು 200 ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಉಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಶ್ರೀಮತಿ ಸುಪ್ರೀತಾ ಜೈನ್ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕರಾದ ಅನಿಲ್ ವಂದಿಸಿದರು.













