ಕಥೆ (ಭಾಗ-1)
ಚೇತನ್ ವರ್ಕಾಡಿ

ಬದಲಾಗುತ್ತಿರುವ ಜಗತ್ತಿನೊಳಗೆ ಹಳ್ಳಿಗಿಂತಲೂ ಪೇಟೆ ಪಟ್ಟಣಗಳನ್ನೆ ಇಷ್ಟ ಪಡುವ ಜನರೆ ಹೆಚ್ಚು.ಪೇಟೆ ನೋಡೋಕೆ ಚೆಂದ ಹಳ್ಳಿ ಬಾಳೋಕೆ ಚಂದ ಅನ್ನೊ ಮಾತುಗಳು ಸತ್ಯವೆನಿಸಿದರು ಇಂದಿನ ಕಾಲಸ್ಥಿತಿ ಪಟ್ಟಣದ ಚಂದಕ್ಕೆ ತಲೆಬಾಗುತ್ತಿದೆ.ಅದೇನೆ ಇರಲಿ ನನ್ನ ಮುಂದಿನ ಕತೆಗೆ ನಿಮ್ಮೆಲ್ಲರನ್ನು ಮತ್ತೊಮ್ಮೆ ಆಹ್ವಾನಿಸುತ್ತಿದ್ದೇನೆ.ಬರವಣಿಗೆಯ ಉದ್ದಕ್ಕೂ ನಿಮ್ಮ ಪ್ರೀತಿಯ ಪ್ರೋತ್ಸಾಹ, ಹಾರೈಕೆಯನ್ನು ಬಯಸುತ್ತೇನೆ…
ಆ ಊರಿನಲ್ಲಿ ರಾಘವನೆಂದರೆ ಎಲ್ಲರಿಗೂ ಅಚ್ಚುಮೆಚ್ಚು.ಹಳ್ಳಿಯಲ್ಲಿ ಹುಟ್ಟಿದರು ರಾಘವನಿಗೆ ತಾನು ತನ್ನ ಕುಟುಂಬ ದುಡಿದು ತಿನ್ನುವಷ್ಟು ಹೊಲಗದ್ದೆಗಳು ಅವನ ಸ್ವಂತ ಆಸ್ತಿಯಲ್ಲಿತ್ತು.ಶ್ರಮಜೀವಿಯಾಗಿದ್ದ ರಾಘವ ದುಡಿವ ಮಣ್ಣಲ್ಲಿ ಬಂಗಾರ ತೆಗೆಯುವ ಪರಿಶ್ರಮಿ.ಇದಕ್ಕೆ ಜೊತೆಯಾಗುತ್ತಿದ್ದವಳೆ ಅವನ ಹೆಂಡತಿ ಯಶೋಧ.ಗಂಡನೆಂದರೆ ದೇವರಂತೆ ಪೂಜಿಸುವವಳು ಅವನ ಮಾತನ್ನು ಎಂದೂ ಚಾಚು ತಪ್ಪದೆ ನಡೆಸುತ್ತಾ ಬಂದವಳು.ಅವರದ್ದೆ ಆದ ಚಿಕ್ಕ ಸಂಸಾರ. ಹಟ್ಟಿಯೊಳಗೆ ಅಂಬಾ ಎಂದು ಕರೆಯುವ ಅವರಲ್ಲಿ ಒಂದಾದ ದನ ನಂದಿನಿ.ಅದರ ಸಮೀಪ ಮನೆ ಸುತ್ತಾ ಓಡಾಡುತ್ತಿರುವ ಆಡು ಮರಿ.ಪುಟ್ಟ ಸಂಸಾರದೊಳಗೆ ಪ್ರೀತಿಯ ಮಟ್ಟವನ್ನೆ ಎತ್ತರಕ್ಕೆ ಕೊಂಡೊಯ್ದವಳು ಅವರಿಬ್ಬರ ಪ್ರೀತಿಯ ಮಗಳು ಮಂಗಳ
ಪ್ರೀತಿ,ಸಹನೆಗೆ ಮತ್ತೊಂದು ಹೆಸರೆ ಮಂಗಳ….
( ಮುಂದುವರಿಯುವುದು….)













