
ಕಾರ್ಕಳ : ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ಈಜು ಸ್ಪರ್ದೆಯಲ್ಲಿ ಕಾರ್ಕಳ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿಕ ಟಿ. ಆರ್ 50 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕ, 50 ಮೀ.ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇವರು ಕಾರ್ಕಳದ ರಘು ಟಿ.ಎನ್ ಸುಮಾ ಎ.ಎಸ್ ಅವರ ಪುತ್ರಿ

10ನೇ ತರಗತಿಯ ವಿದ್ಯಾರ್ಥಿನಿ ಲೆನೊರ ಡಿಸೋಜ 100 ಮೀ. ಫ್ರೀಸ್ಟೈಲ್‌ನಲ್ಲಿ ರಜತ ಪದಕ, 50 ಮೀ.ಫ್ರೀಸ್ಟೈಲ್‌ನಲ್ಲಿ ರಜತ ಪದಕ, ,50 ಮೀ. ಬ್ಯಾಕ್ಸ್ಟ್ರೋಕ್ ನಲ್ಲಿ ರಜತ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇವರು ಕಾರ್ಕಳ ಲ್ಯಾನ್ಸಿ ಡಿಸೋಜ ಮತ್ತು ಫಾತಿಮಾ ನಿಶಾ ಡಿಸೋಜ ಅವರ ಪುತ್ರಿ














