
ಬೆಂಗಳೂರು: ಮೋಹಕ ತಾರೆ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿರುವ ಕುರಿತು ಎಲ್ಲೆಡೆ ಸುದ್ದಿ ಹಬ್ಬಿದ್ದು ಬರುವ ನವೆಂಬರ್ ತಿಂಗಳೊಳಗೆ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿದೆ.
41 ವರ್ಷ ವಯಸ್ಸಿನ ರಮ್ಯಾ ಅವರು ಖ್ಯಾತ ಉದ್ಯಮಿ ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಎಂಬವರನ್ನು ವಿವಾಹವಾಗಲಿದ್ದಾರೆ ಎಂದು ರೂಮರ್ಸ್ ಹಬ್ಬುತ್ತಿದ್ದು ಸದ್ಯದಲ್ಲೇ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.













