ಬ್ರಾಹ್ಮಣ ಸಮಾಜದ ಸಾಧಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ

ಬ್ರಾಹ್ಮಣ ಸಖಾ ಬಳಗವು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ ಇದರ ಸಹಯೋಗದೊಂದಿಗೆ ಸೆಪ್ಟೆಂಬರ್ 1ರ ಭಾನುವಾರ ಸಂಜೆ, ಶ್ರೀಗುರುರಾಘವೇಂದ್ರ ಮಠದಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಆರ್ಥಿಕವಾಗಿ ಹಿಂದುಳಿದ 18 ಬ್ರಾಹ್ಮಣ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದಾನಿಗಳಿಂದ ಸಂಗ್ರಹಿಸಿದ 1 ಲಕ್ಷ 20 ಸಾವಿರ ಮೊತ್ತದ ವಿದ್ಯಾರ್ಥಿವೇತನ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದಂತ ಬ್ರಾಹ್ಮಣ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೌರವ ಧನ ನೀಡಿ ಪುರಸ್ಕರಿಸಲಾಯಿತು.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಡಾ. ಗುರುಚರಣ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು, ಡಾ. ಶ್ರೀರಾಮ ಮುಗೇರಾಯರವರು ಟ್ರಸ್ಟ್ ನ ಕಾರ್ಯಚಟುವಟಿಕೆ ಮತ್ತು ಈಗಿನ ವಿದ್ಯಾರ್ಥಿಗಳು ಪಾಲಿಸಬೇಕಾದ ಕರ್ತವ್ಯಗಳನ್ನು ಮತ್ತು ಮುಂದಿನ ಪೀಳಿಗೆಗೆ ನೀಡಬೇಕಾದ ಕೊಡುಗೆಗಳನ್ನು ವಿವರಿಸಿದರು. ವೆಂಕಟರಾಜ್ ಭಟ್ ಪೆರ್ವಾಜೆಯವರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಯೋಜನೆಗಳಲ್ಲೊಂದಾದ ಗೋಗ್ರಾಸ ಗೋನಿಧಿ ಯೋಜನೆಯ ಬಗ್ಗೆ ವಿವರಿಸಿದರು.
ಹಾಗೆಯೇ ಕಾರ್ಕಳದ ಶ್ರೀ ಗುರುರಾಘವೇಂದ್ರ ಮಠದಲ್ಲಿ ಸುಮಾರು 30 ವರ್ಷಗಳಿಂದ ಚಾಕರಿ ಮಾಡಿಕೊಂಡು ಬರುತ್ತಿರುವ ಶ್ರೀಮತಿ ಸುಮತಿ ದೇವಾಡಿಗರವರನ್ನು ಗುರುತಿಸಿ, ಸಹಾಯಧನ ನೀಡಿ ಗೌರವಿಸಲಾಯಿತು.
ಕು. ಅನಘಾ ಮತ್ತು ಕು. ಅನ್ನಿಕಾ ಪ್ರಾರ್ಥನೆ ಮಾಡಿದರು.
ವಿಘ್ನೇಶ್ ಜೆಪಿ ಪೆರ್ವಾಜೆಯವರು ಕಾರ್ಯಕ್ರಮ ನಿರೂಪಿಸಿ,













