💢 ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 32ನೇ ವರ್ಷದ ಮೊಸರು ಕುಡಿಕೆ

ಸಂತೋಷ್ ಫ್ರೆಂಡ್ಸ್ ಕ್ಲಬ್ (ರಿ), ಸಂತೋಷ್ ಫ್ರೆಂಡ್ಸ್ ಕ್ಲಬ್ ಲೈಬ್ರೆರಿ (ರಿ), ಪ್ರೀತಿ ಮಹಿಳಾ ಸಮಾಜ (ರಿ)ಪಾವಳ ವರ್ಕಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 32ನೇ ವರ್ಷದ ಮೊಸರು ಕುಡಿಕೆ ಮಹೋತ್ಸವ ವಿವಿಧ ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪಾವಳದಲ್ಲಿ ವಿಜೃಂಭಣೆಯಿಂದ ಜರಗಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಚೇತನ್ ವರ್ಕಾಡಿ ಬರೆದ ಪೊಸತಿರಿ ಕಥಾಸಂಕಲನದ ಬಿಡುಗಡೆಯು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಕುಮಾರ್ ಕೊಂದಲಕುಮೇರು ವಹಿಸಿಕೊಂಡಿದ್ದರು.ರವೀಂದ್ರ ಶೆಟ್ಟಿ ಉಳಿದೊಟ್ಟು,ಕೆ,ಆರ್ ಜಯಾನಂದ, ಲೋಕೇಶ್ ಕೂಟತ್ತಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಶ್ರೀಮತಿ ಆಶಾದಿಲೀಪ್ ರೈ ಸುಳ್ಯಮೆ ಪುಸ್ತಕ ಬಿಡುಗಡೆಗೊಳಿಸಿದರು.ಸಮಾಜ ಸೇವಕರಾದ ಡಾ ಉದಯಕುಮಾರ್ ನೂಜಿ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಬಾಲಕೃಷ್ಣ ಶೆಟ್ಟಿ ಪಾವಳ,ತುಳಸಿ ಪಾವಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ, ಮುದ್ದುಕೃಷ್ಣ ವೇಷ,ವಯನಾಡ್ ದುರಂತದಲ್ಲಿ ಮಡಿದವರಿಗೆ ಧನ ಸಹಾಯ ಕಾರ್ಯಕ್ರಮ ನಡೆಯಿತು.ವಿಜಯಕುಮಾರ್ ಪಾವಳ ಸ್ವಾಗತಿಸಿ,ಮೊಹನ್ ಕೂಟತ್ತಜೆ ವಂದಿಸಿದರು.ಕಿಶೋರ್ ಕುಮಾರ್ ಪಾವಳ ಮತ್ತು ಚೇತನ್ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.


































