
ರೈಲ್ವೆ ನೇಮಕಾತಿ ಮಂಡಳಿಯು ದೇಶದಾದ್ಯಂತ ಒಟ್ಟು 6,238 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದೆ.
ಹುದ್ದೆವಾರು ವಿವರ:
ಟೆಕ್ನಿಷಿಯನ್ -1 ಸಿಗ್ನಲ್ : 183
ಟೆಕ್ನಿಷಿಯನ್- 3 : 6,055
ಟೆಕ್ನಿಷಿಯನ್ ಗ್ರೇಡ್ -1 ಹುದ್ದೆ ಪಡೆಯಲು ಕನಿಷ್ಠ 18ರಿಂದ ಗರಿಷ್ಠ 33 ವರ್ಷ ವಯೋಮಿತಿ ಇದ್ದು ಬಿ ಎಸ್ ಸಿ, ಬಿ.ಇ ಅಥವಾ ಬಿ.ಟೆಕ್, ಡಿಪ್ಲೋಮಾ ವಿದ್ಯಾರ್ಹತೆ ಪಡೆದಿರಬೇಕು.
ಟೆಕ್ನಿಷಿಯನ್ ಗ್ರೇಡ್-3 ಹುದ್ದೆ ಪಡೆಯಲು ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷ ವಯೋಮಿತಿ ಇದ್ದು ಎಸ್ ಎಸ್ ಎಲ್ ಸಿ ಪಾಸ್, ಐಟಿಐ ಅಥವಾ 12ನೇ ತರಗತಿ ವಿದ್ಯಾರ್ಹತೆ ಪಡೆದಿರಬೇಕು.
ಮೀಸಲಾತಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದ್ದು ಓಬಿಸಿ/ಮಾಜಿ ಯೋಧರಿಗೆ 3 ವರ್ಷ, ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10-15 ವರ್ಷಗಳ ಸಡಿಲಿಕೆ ಇದೆ.
ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಶುಲ್ಕ 500 ಎಸ್ಸಿ/ಎಸ್ಟಿ, ಮಹಿಳೆಯರು, ಮಾಜಿ ಯೋಧರು, ಅಲ್ಪಸಂಖ್ಯಾತ, ಅಂಗವಿಕಲ ಅಭ್ಯರ್ಥಿಗಳು 250 ರೂಂ. ಪಾವತಿಸಿ https://www.rrbapply.gov.in/#/auth/home ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ಮುಖಾಂತರ ಆಯ್ಕೆ ವಿಧಾನ ನಡೆಯಲಿದ್ದು 28.7.2025 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ https://indianrailways.gov.in ಸಂಪರ್ಕಿಸಬಹುದಾಗಿದೆ.