
ಮಲ್ಪೆ: ಅಕ್ಟೋಬರ್ 28ರಂದು ಚಿಕ್ಕಮಗಳೂರು ಮಾಗಡಿ ಬಳಿ ಸಂಜೆ ಜ್ಯುವೆಲ್ಲರಿ ಅಂಗಡಿಯ ಮಾಲಕರೊಬ್ಬರ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿದ್ದು ಅಂಗಡಿಯ ಮಾಲಕ ಈಜಿ ದಡ ಸೇರಿದ್ದರು. ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದ್ದು ಆದರೆ ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲವು ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಇದೀಗ ಈಶ್ವರ ಮಲ್ಪೆ ಅವರ ತಂಡವು ಸುಮಾರು 20 ಅಡಿ ಆಳದಲ್ಲಿ ಕೆರೆಗೆ ಬಿದ್ದಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇರುವ ಚೀಲವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದೆ.
ಮಾಹಿತಿ ತಿಳಿದ ಈಶ್ವರ್ ಮಲ್ಪೆ ತಂಡವು ಸ್ಥಳಕ್ಕೆ ತೆರಳಿ ಕೇವಲ 15 ನಿಮಿಷದಲ್ಲಿ ಚಿನ್ನದ ಚೀಲವನ್ನು ನೀರಿನಿಂದ ಮೇಲಕ್ಕೆತ್ತಿ ವಾರಸುದಾರರಿಗೆ ಹಿಂದಿರುಗಿಸಿದ್ದು ಇವರ ಈ ಕಾರ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.



















































