“ಸ್ವಚ್ಛ- ಸಂಗಮ” ಸ್ವಚ್ಛತಾ ವಿಚಾರ ವಿನಿಮಯ ಕಾರ್ಯಕ್ರಮ
ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಕಾರ್ಕಳ ಟೈಗರ್ಸ್ ತಂಡದ ಸಂಚಾಲಕರಾದ ಬೋಳ ಪ್ರಶಾಂತ್ ಕಾಮತ್

ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕರೆಗೆ ಸ್ಪಂದಿಸಿ, ಯುವ ಬ್ರಿಗೇಡ್ ಮತ್ತು ರಾಮಕೃಷ್ಣ ಮಿಷನ್ ಮಂಗಳೂರು ಇವರುಗಳ ಸ್ವಚ್ಛ ಕಾರ್ಯದಿಂದ ಸ್ಪೂರ್ತಿ ಪಡೆದು ಕಾರ್ಕಳವನ್ನು ಸ್ವಚ್ಛ ಹಾಗೂ ಕಸಮುಕ್ತ ಮಾಡುವ ಉದ್ದೇಶದಿಂದ ಶ್ರಮಿಸುತ್ತಿರುವ ತಂಡ ಸ್ವಚ್ಛ ಕಾರ್ಕಳ ಬ್ರಿಗೇಡ್ ೫ ವರ್ಷ ಪೂರೈಸುತ್ತಿದೆ.
೫ನೇ ವರ್ಷಾಚರಣೆಯ ಪ್ರಯುಕ್ತ “ಸ್ವಚ್ಛ ಸಂಗಮ: ಸ್ವಚ್ಛತಾ ವಿಚಾರ-ವಿನಿಮಯ ಕಾರ್ಯಕ್ರಮವನ್ನು ಜೂನ್ ೦೨, ಭಾನುವಾರ ಸಾಯಂಕಾಲ ೪ ಗಂಟೆಗೆ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಆಯೋಜಿಸಲಾಗಿದೆ.
ಸ್ವಚ್ಛ ಸಂಗಮ ಕಾರ್ಯಕ್ರಮದ ಅಂಗವಾಗಿ:
೧) “ಪರಿಸರ ಸಂರಕ್ಷಣೆ” ಮತ್ತು “ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ಯುವಕನತೆಯ ಪಾತ್ರ” ಎಂಬ ವಿಷಯಗಳ ಕುರಿತಾಗಿ ಸ್ವಚ್ಛ ಮಂಗಳೂರು ಮಿಷನ್ ನ ಸಂಚಾಲಕರಾದ ಶ್ರೀ ರಂಜನ್ ಬೆಳ್ಳಿರ್ಪಾಡಿ ಮತ್ತು ಯೂನಿವರ್ಸಲ್ ನಾಲೆಜ್ ಟ್ರಸ್ಟ್, ಮಂಗಳೂರಿನ ಸ್ಥಾಪಕರಾದಂತ ಶ್ರೀ ರೋಹನ್ ಎಮ್ ಶಿರಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ “ಸಂವಾದ ಕಾರ್ಯಕ್ರಮ” ನಡೆಯಲಿದೆ.
೨) ಪ್ಲಾಸ್ಟಿಕ್ಕಿಗೆ ಪರ್ಯಾಯವೇನೆಂದು ಡಾ. ಪ್ರಸನ್ನ ಕಾಕುಂಜೆಯವರು ಸಂಪನ್ಮೂಲ ವ್ಯಕ್ತಿಯಾಗಿ ತಿಳಿಸಲಿದ್ದಾರೆ.
೩) RRR: Reduce Reuse Recycle ಎಂಬ ವಿಷಯದ ಮೇಲೆ ರೀಲ್ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ ಹಾಗೂ 1ನೇ ಸ್ಥಾನ: ₹10,000/-
2ನೇ ಸ್ಥಾನ: ₹5,000/-, 3ನೇ ಸ್ಥಾನ: ₹2,500/- ಮೊತ್ತ ಮತ್ತು ಬಹುಮಾನ ಸಭಾ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.
೪) ೫ನೇಯ ವಾರ್ಷಿಕಾಚರಣೆಯ ಸಭಾ ಕಾರ್ಯಕ್ರಮಕ್ಕೆ ಸ್ವಚ್ಛಕಾರ್ಕಳ ಸ್ವರ್ಣ ಕಾರ್ಕಳ ಧ್ಯೇಯವಾಗಿ ಹಲವಾರು ಸ್ವಚ್ಛತಾಅಭಿಯಾನದಲ್ಲಿ ಪಾಲುಗೊಂಡ ಕಾರ್ಕಳದ ಮಾನ್ಯ ಶಾಸಕ ವಿ.ಸುನಿಲ್ ಕುಮಾರ್ ಮತ್ತು ನದಿ, ಕಡಲತೀರಾಗಳನ್ನು ಸಂರಕ್ಷಿಸಲು ಹಲವಾರು ಸ್ವಚ್ಛತಾ ಅಭಿಯಾನಗಳ ನೇತೃತ್ವ ವೈಸಿಕೊಂಡಂತ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟೀ ವಿವೇಕ್ ಆಳ್ವ ಅವರುಗಳು ಮುಖ್ಯ ಅತಿಥಿಗಳಾಗಿ ಸಭೆಯನ್ನು ಉದೇಶಿಸಿ ಮಾತನಾಡಲಿದ್ದಾರೆ.
“ಸ್ವಚ್ಛ ಸಂಗಮದ” ಆಮಂತ್ರವನು ಉದ್ಘಾಟಿಸಿ ಕಾರ್ಯಕ್ರಮಕೆ ಕಾರ್ಕಳದ ಪ್ರತಿಷ್ಠಿತ ಉದ್ಯಮಿ ಹಾಗೂ ಕಾರ್ಕಳ ಟೈಗರ್ಸ್ ತಂಡದ ಸಂಚಾಲಕರಾದಂತ ಬೋಳ ಪ್ರಶಾಂತ್ ಕಾಮತ್ ಅವರು ಶುಭಹಾರೈಸಿದರು.