
ಸಾರ್ವಜನಿಕ ಶನಿ ಪೂಜಾ ಸಮಿತಿ ಮತ್ತು ವೀರ ಮಾರುತಿ ಶಾಖೆ ಬಜರಂಗದಳ ಕರಿಯಕಲ್ಲು ಕಾರ್ಕಳ ಇದರ 23ನೇ ವರ್ಷದ ಸಾರ್ವಜನಿಕ ಶ್ರೀ ಶನಿಪೂಜೆಯ ಪ್ರಯುಕ್ತ ರಕ್ತದಾನ ಶಿಬಿರವು ಇಂದು ಮಯೂರ ಇಂಟರ್ ನ್ಯಾಷನಲ್ ಸಭಾಭವನದಲ್ಲಿ ಬೆಳಿಗ್ಗೆ 8.30 ರಿಂದ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿಗಳಾದ ಉದಯ್ ಸಾಲ್ಯಾನ್ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಕೆ.ಜಿ. ರಾಮಪ್ಪ, ಉಪಾದ್ಯಕ್ಷರು ಗ್ಯಾರೇಜ್ ಮಾಲಕರ ಸಂಘ ಮಂಗಳೂರು, ಅಮಿತಾ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯರು ಸಾಣೂರು, ಪ್ರಣಯ್ ನಿಟ್ಟೆ, ಸುರಕ್ಷಾ ಪ್ರಮುಖ್ ಬಜರಂಗದಳ, ಕಾರ್ಕಳ ಪ್ರಖಂಡ ಹಾಗೂ ಉದ್ಯಮಿಗಳಾದ ಗಿರೀಶ್ ರಾವ್,ವೈದ್ಯರಾದ ವೀಣಾ, ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋ ರಕ್ಷಾ ಪ್ರಮುಖರಾದ ಸುನಿಲ್ ಕೆ ಆರ್ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು




















