ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 2027ರ ಆ.15ರಂದು ದೇಶದ ಮೊದಲ ಬುಲೆಟ್ ರೈಲಿನ ಸಂಚಾರ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನದಂದು ಚಾಲನೆ ನೀಡಲಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾತನಾಡಿ ‘508 ಕಿ.ಮೀ ದೂರದ ಒಟ್ಟು ಯೋಜನೆಯಲ್ಲಿ ಮೊದಲಿಗೆ ಗುಜರಾತ್‌ನ ಸೂರತ್ ಮತ್ತು ಬಿಳಿಮೋರಾ (50 ಕಿ.ಮೀ) ನಡುವೆ ಹಂತವು ಉದ್ಘಾಟನೆಗೊಳ್ಳಲಿದೆ. ಆ ಬಳಿಕ ವಾಪಿ – ಸೂರತ್ (100 ಕಿ.ಮೀ), ವಾಪಿ – ಅಹಮದಾಬಾದ್ (300–320 ಕಿ.ಮೀ) ಮತ್ತು ಥಾಣೆ-ಅಹಮದಾಬಾದ್ (450–490 ಕಿ.ಮೀ) ಮಾರ್ಗವು ಪೂರ್ಣಗೊಳ್ಳಲಿವೆ. ಅಹಮದಾಬಾದ್- ಮುಂಬೈ ನಡುವಿನ ಪೂರ್ಣ ಮಾರ್ಗವು 2029ಕ್ಕೆ ಲೋಕಾರ್ಪಣೆಗೊಳ್ಳಲಿದೆ’ ಎಂದು ಮಾಹಿತಿ ನೀಡಿದ್ದಾರೆ.






