ಅಧ್ಯಕ್ಷರಾಗಿ ಜೇಸಿ ಅವಿನಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಸುಶಾಂತ್ ಶೆಟ್ಟಿ

2026 ನೇ ಸಾಲಿನ ಜೇಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಜೇಸಿ ಅವಿನಾಶ್ ಜಿ.ಶೆಟ್ಟಿ, ಕಾರ್ಯದರ್ಶಿಯಾಗಿ ಸುಶಾಂತ್ ಶೆಟ್ಟಿ, ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸುಶ್ಮಿತಾ ರಾವ್,ರಕ್ಷಿತ್ ರಾವ್, ಶಿವ ಕುಮಾರ್, ಶಾಹಿನ್ ರಿಜ್ವಾನ್ ಖಾನ್, ರೇವತಿ ಶೆಟ್ಟಿ ಜೊತೆ ಕಾರ್ಯದರ್ಶಿ ರಿಜ್ವಾನ್ ಖಾನ್
ಕೋಶಾಧಿಕಾರಿ ಮಂಜುನಾಥ್ ಡಿ,ಚುನಾವಣಾ ಕಮಿಟಿಯ ಚೇರ್ಮನ್ ಪ್ರಚಿತ್ ಕುಮಾರ್ ಹಾಗೂ ಸದಸ್ಯರಾದ ವಿಘ್ನೇಶ್ ಪ್ರಸಾದ್, ಡಾ. ಮುರಳೀಧರ ಭಟ್ ಇವರ ಚುನಾವಣಾ ಪ್ರಕ್ರಿಯೆ ನಡೆಸಿ, ಜೆಸಿಐ ಕಾರ್ಕಳದ ಅಧ್ಯಕ್ಷೆ ಜೇಸಿ ಶ್ವೇತಾ ಜೈನ್ ಇವರು ಎಲ್ಲಾ ಪೂರ್ವಾಧ್ಯಕ್ಷರ ಸಮ್ಮುಖದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು.


ಅಧ್ಯಕ್ಷರಾಗಿ ಆಯ್ಕೆಯಾದ ಅವಿನಾಶ್ ಜಿ ಶೆಟ್ಟಿ ಯವರು ಅಮ್ಮನ ನೆರವು ಎಂಬ ಚಾರಿಟೇಬಲ್ ಟ್ರಸ್ಟ್ ನ್ನು ಸ್ಥಾಪಿಸಿ, ಹಲವಾರು ವಿದ್ಯಾರ್ಥಿಗಳಿಗೆ ಹಾಗೂ ಬಡ ಕುಟುಂಬಗಳಿಗೆ ನೆರವಾಗುತ್ತಿರುವ ಸಮಾಜ ಸೇವಕ, 2025ನೇ ಸಾಲಿನ ಸಾಧನ ಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.







